ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್ ಉದ್ಯೋಗ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ, 21,413 ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳನ್ನು ಅರ್ಜಿ ಅಹ್ವಾನ ಮಾಡಲಾಗಿದೆ.
10ನೇ ತರಗತಿ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಸ್ಕೂಟರ್ ಓಡಿಸುವ ಸಾಮರ್ಥ್ಯ ಹೊಂದಿರಬೇಕು. 10 ನೇ ತರಗತಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅರ್ಹರು ಮಾರ್ಚ್ 3 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ ಮತ್ತು ಅರ್ಹತೆ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 10-02-2025 ,ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2025,ತಿದ್ದುಪಡಿ : 06.03.2025 ರಿಂದ 08.03.2025 ರವರೆಗೆ,ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು,ಗರಿಷ್ಠ ವಯಸ್ಸಿನ ಮಿತಿ: 40 ವರ್ಷಗಳು,ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಸಂಬಳ
ಬಿಪಿಎಂ ಹುದ್ದೆಗಳಿಗೆ – ರೂ.12,000 ರಿಂದ ರೂ.29,380
ಡಾಕ್ ಸೇವಕ್ – ರೂ.10,000 ರಿಂದ ರೂ.24,470
ಅರ್ಜಿ ಸಲ್ಲಿಸಲು:ಕ್ಲಿಕ್ ಮಾಡಿ
0 Comments