ಹೆನ್ಲೆ ಇಂಡೆಕ್ಸ್ ನೀಡುವ ವಿಶ್ವದ ಬಲಿಷ್ಠ ಪಾಸಪೋರ್ಟ್ ನಲ್ಲಿ ಭಾರತ ಐದು ಸ್ಥಾನದ ಕುಸಿತವನ್ನು ಕಂಡಿದೆ. ಆ ಮೂಲಕ, 2024ರಲ್ಲಿ 80ನೇ ಸ್ಥಾನದಿಂದ, 2025ರಲ್ಲಿ 85 ಸ್ಥಾನಕ್ಕೆ ಕುಸಿದಿದೆ. ಮೋಸ್ಟ್ ಪವರಫುಲ್ ಪಾಸ್ಪೋರ್ಟ್ ನಲ್ಲಿ ಸಿಂಗಾಪುರ ಮೊದಲನೇ ಸ್ಥಾನದಲ್ಲಿದೆ ಮತ್ತು ಜಪಾನ್ ನಂತರದ ಸ್ಥಾನದಲ್ಲಿದೆ.
ಹಲವು ಮಾನದಂಡಗಳನ್ನು ಆಧರಿಸಿ ಹೆನ್ಲೆ ಪಾಸಪೋರ್ಟ್ ಇಂಡೆಕ್ಸ್ ನೀಡಲಾಗುವ ವಿಶ್ವದ ಬಲಿಷ್ಠ ಪಾಸಪೋರ್ಟ್ ಶ್ರೇಯಾಂಕದಲ್ಲಿ ಭಾರತ 2025ರ ಸಾಲಿನಲ್ಲಿ ಐದು ಸ್ಥಾನದ ಕುಸಿತವನ್ನು ಕಂಡಿದೆ. ಕಳೆದ ಎರಡು ದಶಕಗಳಲ್ಲಿ ಭಾರತದ ಶ್ರೇಯಾಂಕದಲ್ಲಿ ಬದಲಾವಣೆಯಾಗುತ್ತಲೇ ಇದೆ.
ಜಗತ್ತಿನ ಬಲಿಷ್ಠ ಪಾಸಪೋರ್ಟ್ ಶ್ರೇಯಾಂಕದಲ್ಲಿ ಭಾರತ 80 ರಿಂದ 85ಸ್ಥಾನಕ್ಕೆ ಕುಸಿದಿದೆ. ಆ ಮೂಲಕ, ಐದು ಸ್ಥಾನ ಕೆಳಕ್ಕೆ ಇಳಿದಿದೆ ಎಂದು ಹೆನ್ಲೆ ಇಂಡೆಕ್ಸ್ ಹೇಳಿದೆ. ಹೆನ್ಲೆ, ಎಲ್ಲಾ 199 ರಾಷ್ಟ್ರಗಳಿಗೆ ಶ್ರೇಯಾಂಕವನ್ನು ನೀಡುತ್ತದೆ. ಅದರಲ್ಲೀಗ ಭಾರತ, 85ನೇ ಸ್ಥಾನದಲ್ಲಿದೆ,
ತಮ್ಮ ದೇಶದಲ್ಲಿ ವೀಸಾ ಇಲ್ಲದೇ ಎಷ್ಟು ರಾಷ್ಟ್ರಗಳ ಪ್ರಜೆಗಳು ಪ್ರಯಾಣಿಸಬಹುದು ಎನ್ನುವ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗುತ್ತದೆ. ಅಂತರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ ( International Air Transport Association) ಒದಗಿಸುವ ದತ್ತಾಂಶದ ಆಧಾರದ ಮೇಲೆ ಶ್ರೇಯಾಂಕ ನಿಗದಿಯಾಗುತ್ತದೆ.ಇದರ ಪ್ರಕಾರ, ಭಾರತದ ಪಾಸಪೋರ್ಟ್ ಹೊಂದಿದವರು 57 ದೇಶಕ್ಕೆ ವೀಸಾ ಇಲ್ಲದೇ ಪ್ರಯಾಣಿಸಬಹುದಾಗಿದೆ. 2006ರಲ್ಲಿ 71ನೇ ಸ್ಥಾನದಲ್ಲಿ ಭಾರತದ ಪಾಸಪೋರ್ಟ್ ಇತ್ತು. ಪ್ರಮುಖವಾಗಿ, 2015 - 2021ರ ಅವಧಿಯಲ್ಲಿ ಬಹಳಷ್ಟು ಹಿನ್ನಡೆಯನ್ನು ಕಂಡಿತು.
ಯುನೈಟೆಡ್ ಅರಬ್ ಎಮಿರೇಟ್ಸ್ ಭಾರೀ ಏರಿಕೆಯನ್ನು ಕಂಡಿದ್ದು, ಟಾಪ್ ಟೆನ್ ಒಳಗೆ ಸ್ಥಾನವನ್ನು ಪಡೆದುಕೊಂಡ ಮೊದಲ ಅರಬ್ ಗಣರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದೇಶದ ಪಾಸಪೋರ್ಟ್ ಹೊಂದಿದವರು 72 ದೇಶಗಳಲ್ಲಿ ಪ್ರಯಾಣಿಸಬಹುದಾಗಿದೆ.
0 Comments