ಇದೇ ವರ್ಷ 2024ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಈ ಯೋಜನೆಗಾಗಿ 10,900 ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ. ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ವಿವಿಧ ಎಲೆಕ್ನಿಕ್ ವೆಹಿಕಲ್‌ಗಳಿಗೆ ಸಹಾಯಧನ (ಸಬ್ಸಿಡಿ) ಘೋಷಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ 2026 ಮಾರ್ಚ್ 31ರ ವರೆಗೆ ಈ ಯೋಜನೆ ಚಾಲ್ತಿಯಲ್ಲಿರಲಿದೆ.
ಪಿ. ಎಂ. ಇ ಡ್ರೈವ್ ಯೋಜನೆಯ ಉದ್ದೇಶ :
ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳಿಂದ ಪರಿಸರದ ಮಾಲಿನ್ಯದ ಹೆಚ್ಚಾಗುತ್ತಿದ್ದೂ, ಇದನ್ನು ಹತೋಟಿಗೆ ತರಲು ಮತ್ತು ವಿದ್ಯುತ್ ಚಾಲಿತ ವಾಹನ ಉಪಯೋಗವನ್ನು ಹೆಚ್ಚಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.
ಈ ಯೋಜನೆಯ ಅಡಿಯಲ್ಲಿ ವಿವಿಧ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲು ಕೇಂದ್ರ ಸರ್ಕಾರವು 32,500ರೂ. ವರೆಗೆ ಸಬ್ಸಿಡಿ ನೀಡುತ್ತಿದೆ.
ಯಾವ ವಾಹನಗಳಿಗೆ ಎಷ್ಟು ಸಬ್ಸಿಡಿ ?
* ಎಲೆಕ್ನಿಕ್ ದ್ವಿ-ಚಕ್ರ ವಾಹನ ಖರೀದಿಸುವವರಿಗೆ ಮೊದಲ ವರ್ಷದಲ್ಲಿ 10,000ರೂ. ಹಾಗೂ ಎರಡನೇ ವರ್ಷ 5,000ರೂ. ನೀಡಲಾಗುವುದು.
* ತ್ರಿ-ಚಕ್ರ ವಾಹನಗಳಿಗೆ ಮೊದಲ ವರ್ಷ 25,000ರೂ. ಹಾಗೂ ಎರಡನೇ ವರ್ಷ 12,500ರೂ. ನೀಡಲಾಗುತ್ತದೆ.
ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯ ಅಡಿಯಲ್ಲಿ ಲಾಭ ಪಡೆಯಲು ಮೊದಲು ನಿಮ್ಮ ವಿದ್ಯುತ್ ವಾಹನವನ್ನು ನಿಮ್ಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಮಾಡಿಸಿರಿ. ನಂತರದಲ್ಲಿ ನಿಮ್ಮ ವಾಹನದ ಡಿಲರ್ ನಿಮ್ಮ ಆಧಾರ್ ಸಂಖ್ಯೆ ಬಳಸಿ ನಿಮಗೆ e-Voucher ನೀಡುತ್ತಾರೆ.
ಇದರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ - Click Here
0 Comments