Ticker

6/recent/ticker-posts

ರೈಲ್ವೆ ಇಲಾಖೆ ಶಿಕ್ಷಕರ ನೇಮಕಾತಿ | 1036 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶ

 

ಇಂಡಿಯನ್‌ ರೈಲ್ವೆಯು 1036 ಮಿನಿಸ್ಟೇರಿಯಲ್ ಮತ್ತು ಐಸೋಲೇಟೆಡ್‌ ಕೆಟಗರಿಯ ಹುದ್ದೆಗಳಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದ್ದು, ಜನವರಿ 7 ರಿಂದ ಫೆಬ್ರುವರಿ 06 ರವರೆಗೆ ಅರ್ಜಿ ಸ್ವೀಕಾರ ಮಾಡಲಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ. ಅರ್ಜಿ ಹಾಕುವ ವಿಧಾನವನ್ನು ಕೆಳಗಿನಂತೆ ತಿಳಿಸಲಾಗಿದೆ. ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದ್ದು, ಬೇರೆ ಯಾವುದೇ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಶಿಕ್ಷಕರು ಹುದ್ದೆಗಳ ವಿವರ

ಪೋಸ್ಟ್ ಗ್ರಾಜುಯೇಟ್ ಟೀಚರ್ : 187

ಟ್ರೇನ್ಸ್ ಗ್ರಾಜುಯೇಟ್ ಟೀಚರ್ : 338

ಪ್ರೈಮರಿ ರೈಲ್ವೆ ಟೀಚರ್ : 188

ಅಸಿಸ್ಟೆಂಟ್ ಟೀಚರ್ : 02

ಮ್ಯೂಸಿಕ್ ಟೀಚರ್ : 03

ಜೂನಿಯರ್ ಟ್ರಾನ್ಸೆಟರ್ : 130

ಫಿಸಿಕಲ್ ಟ್ರೇನಿಂಗ್ ಇನ್‌ಸ್ಪೆಕ್ಟರ್ : 18 ಲೈಬ್ರರಿಯನ್ : 10

ಲ್ಯಾಬೋರೇಟರಿ ಅಸಿಸ್ಟೆಂಟ್ : 07

ಲ್ಯಾಬ್ ಅಸಿಸ್ಟಂಟ್ : 12

ಮೇಲ್ಕಾಣಿದ ಶಿಕ್ಷಕ ಹುದ್ದೆಗಳು ಸೇರಿದಂತೆ ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ ಪಾಸಾದವರಿಗೆ ಸೈಂಟಿಫಿಕ್ ಸೂಪರ್ ವೈಸರ್ 3, ಚೀಫ್ ಲಾ ಅಸಿಸ್ಟೆಂಟ್ 54, ಪಬ್ಲಿಕ್ ಪ್ರಾಸಿಕ್ಯೂಟರ್ 20, ಸೈಂಟಿಫಿಕ್ ಅಸಿಸ್ಟೆಂಟ್/ ಟ್ರೇನಿಂಗ್ 2, ಸೀನಿಯರ್ ಪಬ್ಲಿಸಿಟಿ ಇನ್ಸಪೆಕ್ಟರ್ 3, ಸ್ಟಾಫ್ ಆ್ಯಂಡ್‌ ವೇಲ್‌ಫೇರ್ ಇನ್‌ಸ್ಪೆಕ್ಟರ್ 59 ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ

ಆಯಾ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ ಪೂರೈಸಿರುವ ಅಭ್ಯರ್ಥಿಗಳು ಶಿಕ್ಷಕ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆಗೆ ಎಂಎಸ್‌ಸಿ, ಎಂಸಿಎ, ಬಿಎಸ್‌ಸಿ, ಬಿಇ, ಬಿ.ಟೆಕ್ ಪದವಿ ಪಡೆದಿದ್ದರೆ ಸಾಕು. ಬಡ್ತಿ ಹಂತದಲ್ಲಿ ಮಾತ್ರ ಬಿ.ಇಡಿ ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ನುಳಿದ ಹುದ್ದೆಗಳಿಗೆ ಎಸ್‌ಎಸ್ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಪೂರ್ಣಗೊಳಿಸಿರುವವರನ್ನು ಪರಿಗಣಿಸಲಾಗುತ್ತದೆ ಎಂದು ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

ವಯೋಮಿತಿ ವಿವರ

2025ರ ಜನವರಿ 1ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ಗರಿಷ್ಠ 48 ವರ್ಷದೊಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಯ ಅನ್ವಯ ವರ್ಗ, ಪಂಗಡವಾರು ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಮಾಸಿಕ ವೇತನವೆಷ್ಟು?

ರೈಲ್ವೆ ಇಲಾಖೆಯ ಶಿಕ್ಷಕರು ಸೇರಿದಂತೆ ಇತರ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಹುದ್ದೆವಾರು ಆರಂಭಿಕ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

ಶಿಕ್ಷಕ ಹುದ್ದೆಗಳು : 35,400 - 47,500 ರೂ. 

ಉಳಿದ ಹುದ್ದೆಗಳು : 19,900 – 44,900 ರೂ.

ಪರೀಕ್ಷೆ ಮತ್ತು ಅರ್ಜಿ ಸಲ್ಲಿಕೆ

ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎರಡು ಹಂತಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಇದಲ್ಲದೆ ಕೌಶಲ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಇರಲಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು. ಸೂಕ್ತ ದಾಖಲಾತಿಗಳನ್ನು ಅಪ್ ಲೋಡ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆ ಮುಗಿಸಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 07-01-2025 

ಅರ್ಜಿ ಸಲ್ಲಿಕೆ ಕೊನೇ ದಿನಾಂಕ : 07-02-2025

ಅಧಿಸೂಚನೆ:ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು:ಇಲ್ಲಿ ಕ್ಲಿಕ್ ಮಾಡಿ

Post a Comment

0 Comments