ಕೋಟಕ್ ಎಜುಕೇಶನ್ ಫೌಂಡೇಶನ್ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವಲ್ಲಿ ದೀರ್ಘ ಪರಂಪರೆ ಮತ್ತು ಪರಿಣತಿಯನ್ನು ಹೊಂದಿದೆ. ಕೋಟಕ್ ಕನ್ಯಾ ವಿದ್ಯಾರ್ಥಿವೇತನ ಕಾರ್ಯಕ್ರಮವು ಭಾರತದಾದ್ಯಂತದ ಹಿಂದುಳಿದ ಸಮುದಾಯಗಳ ಪ್ರತಿಭಾನ್ವಿತ ಹೆಣ್ಣು ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಲು ಮತ್ತು ಬಡತನ ರೇಖೆಯ ಮೇಲೆ ಏರಲು ಹಣಕಾಸಿನ ನೆರವು ನೀಡುತ್ತದೆ.
ಇದು ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳು (Kotak Mahindra Group of Companies) ಮತ್ತು ಕೋಟಕ್ ಎಜುಕೇಶನ್ ಫೌಂಡೇಶನ್ನ (Kotak Education Foundation) ಸಹಯೋಗದ ಸ್ಕಾಲರ್ಶಿಪ್ ಯೋಜನೆಯಾಗಿದ್ದು, ಈ ಸ್ಕಾಲರ್ಶಿಪ್ ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ 12ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ಸಹಾಯವನ್ನು ನೀಡುವ ಗುರಿ ಹೊಂದಿದೆ.
ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಅವರ ವೃತ್ತಿಪರ ಪದವಿ ಕೋರ್ಸ್ ಅನ್ನು ಪೂರ್ಣಗೊಳಿಸುವ ವರೆಗೆ ಪ್ರತಿ ವರ್ಷಕ್ಕೆ 1.5 ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
ಬೋಧನಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಇಂಟರ್ನೆಟ್, ಸಾರಿಗೆ, ಲ್ಯಾಪ್ಟಾಪ್ಗಳು, ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಒಳಗೊಂಡಂತೆ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಈ ವಿದ್ಯಾರ್ಥಿವೇತನದ ಮೊತ್ತವನ್ನು ಬಳಸಿಕೊಳ್ಳಬೇಕು.
'ಕೋಟಕ್ ಕನ್ಯಾ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸುವವರು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 75% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯವು 6,00,000ಕ್ಕಿಂತ ಕಡಿಮೆ ಇರಬೇಕು.
ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಇಂಟಿಗ್ರೇಟೆಡ್ ಎಲ್ಎಲ್ಬಿ (5 ವರ್ಷಗಳು) ಮುಂತಾದ ವೃತ್ತಿಪರಪದವಿಗಳಿಗೆ ಮಾನ್ಯತೆ ಪಡೆದ ಪ್ರತಿಷ್ಠಿತ ಸಂಸ್ಥೆಗಳಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ ಮೊದಲ ವರ್ಷದ ಪದವಿಗೆ ಪ್ರವೇಶ ಪಡೆದಿರಬೇಕು.
ಯಾವೆಲ್ಲ ವೃತ್ತಿಪರ ಕೋರ್ಸ್'ಗೆ ನೆರವು ಸಿಗಲಿದೆ?
ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಇಂಟಿಗ್ರೇಟೆಡ್ ಎಲ್ಎಲ್ಬಿ (5 ವರ್ಷಗಳು), ಬಿ. ಫಾರ್ಮಸಿ, ಬಿಎಸ್ಸಿ ಮುಂತಾದ ವೃತ್ತಿಪರ ಪದವಿ ಕೋರ್ಡ್ಗಳನ್ನು ಮುಂದುವರಿಸಲು ಬಯಸುವ ಹುಡುಗಿಯರು ಈ ಸ್ಕಾಲರ್ಶಿಪ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
NAAC/NIR ಮಾನ್ಯತೆ ಪಡೆದ ಸಂಸ್ಥೆಗಳಿಂದ ನರ್ಸಿಂಗ್, ಇಂಟಿಗ್ರೇಟೆಡ್ BS-MS/BS ರಿಸರ್ಚ್, ISER, IISC (ಬೆಂಗಳೂರು) ಅಥವಾ ವಿನ್ಯಾಸ, ಆರ್ಕಿಟೆಕ್ಚರ್ ಇತರ ವೃತ್ತಿಪರ ಕೋರ್ಸ್'ಗಳನ್ನು ಕಲಿಯಲು ಈ ಆರ್ಥಿಕ ನೆರವು ಸಿಗಲಿದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
* 12ನೇ ತರಗತಿಯ ಅಂಕಪಟ್ಟಿ
* ಕುಟುಂಬದ ಆದಾಯ ಪುರಾವೆ
* 2024-25 ಶೈಕ್ಷಣಿಕ ವರ್ಷದ ಶುಲ್ಕ ರಶೀದಿ
* ಕಾಲೇಜು ಪ್ರವೇಶ ಪರೀಕ್ಷೆಯ ಅಂಕಪಟ್ಟಿ
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ಬುಕ್
* ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 20-12-2024
ಅರ್ಜಿ ಸಲ್ಲಿಸಲು:Click ಮಾಡಿ
0 Comments