Ticker

6/recent/ticker-posts

ಕ್ರಸ್ಟ್ ಎಜುಕೇಷನಲ್ ಕನ್ಸಲ್ಟೆಂಟ್ಸ್ ಪುತ್ತೂರುI ಇವರ ವತಿಯಿಂದ ಆಟೋ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ.

 


ಕ್ರಸ್ಟ್ ಎಜುಕೇಶನಲ್ ಕನ್ಸಲ್ಟೆಂಟ್ಸ್,ಪುತ್ತೂರು ಸಂಸ್ಥೆಯು 2011 ರಿಂದ ಕೋರ್ಸುಗಳ ಮಾಹಿತಿ ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿವೇತನ ಅರ್ಜಿ ಹಾಗೂ ಮಾಹಿತಿ ಸೇರಿದಂತೆ ವಿವಿಧ ಶೈಕ್ಷಣಿಕ ಸೇವೆಗಳನ್ನು ಕನಿಷ್ಟ ಸೇವಾ ಶುಲ್ಕದೊಂದಿಗೆ ವಿದ್ಯಾರ್ಥಿಗಳಿಗೆ ಒದಗಿಸುತ್ತಾ ಬರುತ್ತಿದ್ದು,ಅತ್ಯಂತ ವಿಶ್ವಾಸಾರ್ಹ ಮಾಹಿತಿಗಳನ್ನು ಮಾತ್ರ ಒದಗಿಸುತ್ತದೆ. ಇಂಡಿಯನ್ ಆಯಿಲ್ ಪೆಟ್ರೋನಾಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನೀಡುವ ಈ ವಿದ್ಯಾರ್ಥಿವೇತನದ ವಿವರಗಳನ್ನು ಮಾಹಿತಿಗಾಗಿ ಮಾತ್ರ ಒದಗಿಸಲಾಗಿದೆ.

 ಅರ್ಜಿ ಸಲ್ಲಿಸಲು ಅರ್ಹತೆ:

1. ಪ್ರಥಮ ಪಿಯುಸಿ ಅಥವಾ ದ್ವಿತೀಯ ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ. 

2. ವಿದ್ಯಾರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು.

3. ಯಾವುದೇ ಆದಾಯ ಮಿತಿ ಇರುವುದಿಲ್ಲ.

4. ಹತ್ತನೇ ತರಗತಿಯಲ್ಲಿ ಕನಿಷ್ಠ ಶೇ.60+ ಅಂಕಗಳನ್ನು ಪಡೆದಿರಬೇಕು.


ಅಗತ್ಯ ದಾಖಲಾತಿಗಳು ಈ ಕೆಳಗಿನ ಎಲ್ಲವೂ ಕಡ್ಡಾಯ 

1. ಹತ್ತನೇ ತರಗತಿಯ ಅಂಕಪಟ್ಟಿಯ ಜೆರಾಕ್ಸ್‌.

2. ವಿದ್ಯಾರ್ಥಿಯ ಆಧಾರ ಕಾರ್ಡು (ಎರಡೂ ಬದಿಯ ಜೆರಾಕ್ಸ್.)

3. ತಂದೆ ತಾಯಿಯ ಡ್ರೈವಿಂಗ್ ಲೈಸೆನ್ಸ್ & ಆಟೋ ಚಾಲಕರ ನೋಂದಣಿ ಪತ್ರ. 

4 ಆದಾಯ ಪ್ರಮಾಣಪತ್ರದ ಜೆರಾಕ್ಸ್‌.

5. ಕಾಲೇಜು ವಾರ್ಷಿಕ ಶುಲ್ಕ ಕಟ್ಟಿದ ರಶೀದಿಯ ಜೆರಾಕ್ಸ್‌ (ಇಲ್ಲದಿದ್ದಲ್ಲಿ ಫೀಸ್ ಸ್ಪೆಕ್ಟರ್). 

6. ಈಗಿನ ಕಾಲೇಜಿನಿಂದ ಪಡೆದ ಬೊನಾಸೈಡ್ ಸ್ಟಡಿ ಸರ್ಟಿಫಿಕೇಟ್ (ಒರಿಜಿನಲ್). 

7. ವಿದ್ಯಾರ್ಥಿಯ ಬ್ಯಾಂಕ್ ಪಾಸುಹುಸ್ತಕದ ಅವರ ಸ್ಪಷ್ಟವಾಗಿ ಕಾಣುವ ಜೆರಾಕ್ಸ್‌. 

8.1. ವಿದ್ಯಾರ್ಥಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ.

ಅರ್ಜಿ ಹೇಗೆ ಸಲ್ಲಿಸುವುದು?ಅರ್ಜಿ ಸಲ್ಲಿಸಲು ನೀವು ಈ ಕೆಳಗೆ ನೀಡಿರುವ ವಿಳಾಸಕ್ಕೆ ದಾಖಲೆಗಳೆಯೊಂದಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

2ನೇ ಮಹಡಿ,ಶಾಫಿ ಕಾಂಪ್ಲೆಕ್ಸ, ಹೂವಿನ ಮಾರುಕಟ್ಟೆ ಸಮೀಪ. ಪೂರ್ವಿಕಾ ಮೊಬೈಲ್ಸ್ ಮೇಲ್ಗಡೆ,ಮುಖ್ಯರಸ್ತೆ,ಪುತ್ತೂರು ದ.ಕ 574201(Phone/Whatsapp:9483570056) ಸಮಯ:10 to 5:30

ಕೊನೆಯ ದಿನಾಂಕ:31/01/2025



Post a Comment

0 Comments