ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಚ್‌ಎಎಲ್’ನಲ್ಲಿ (Hindustan Aeronautics Limited: HAL) ಖಾಲಿ ಇರುವ ತಂತ್ರಜ್ಞರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಬೆಂಗಳೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಈ ಸಂಸ್ಥೆಯು ವಿಮಾನ, ಹೆಲಿಕಾಪ್ಟರ್ ಹಾಗೂ ರಕ್ಷಣಾ ಕ್ಷೇತ್ರದ ಸಾಮಗ್ರಿಗಳನ್ನು ಮತ್ತು ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿದ್ದು; ತಂತ್ರಜ್ಞ ಮತ್ತು ಫೈರ್‌ಮನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ
ವಯೋಮಿತಿ ಹಾಗೂ ವೇತನ ವಿವರ
ಅಭ್ಯರ್ಥಿಯ ಗರಿಷ್ಠ ವಯಸ್ಸು ಕಳೆದ ನವೆಂಬರ್ 21ಕ್ಕೆ ಅನ್ವಯವಾಗುವಂತೆ 28 ವರ್ಷದ ಒಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮತಿ ಸಡಿಲಿಕೆ ಇದೆ.
ಟೆಕ್ನಿಷಿಯನ್ (ಡಿ6) ಹುದ್ದೆಗಳಾದ ಮೆಕಾನಿಕಲ್, ಎಲೆಕ್ಟ್ರಿಕಲ್ ಹಾಗೂ ಇನ್‌ಸ್ಟ್ರುಮೆಂಟೇಷನ್/ಎಲೆಕ್ಟ್ರಾನಿಕ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 23,000 ರೂಪಾಯಿ ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯೊಂದಿಗೆ hal-india.co.in ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್’ನಲ್ಲಿ ಅರ್ಜಿ ಸಲ್ಲಿಸಬೇಕು. ಸಂವಹನ ಉದ್ದೇಶಕ್ಕಾಗಿ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕು.
- ಮೆಕಾನಿಕಲ್ : 19
- ಎಲೆಕ್ಟ್ರಿಕಲ್ : 19
- ಇನ್‌ಸ್ಟ್ರುಮೆಂಟೇಷನ್/ಎಲೆಕ್ಟ್ರಾನಿಕ್ಸ್ : 02
- ಏರೋಡ್ರೋಮ್ : 01
0 Comments