ಗದಗ ಜಿಲ್ಲೆ): ‘ಗೃಹಲಕ್ಷ್ಮಿ’ ಯೋಜನೆ ನೆರವಿನ ಹಣವನ್ನು ಪಟ್ಟಣದ ಅತ್ತೆ ಮತ್ತು ಸೊಸೆ ಇಬ್ಬರೂ ಜಮೀನಿನಲ್ಲಿ ಕೊಳೆವೆಬಾವಿ ಕೊರೆಸಲು ಸದ್ಬಳಕೆ ಮಾಡಿಕೊಂಡಿದ್ದಾರೆ.
ಪಟ್ಟಣದ ಮಾಲ್ದಾರ್ ಕುಟುಂಬದ ಅತ್ತೆ ಮಾಬುಬೀ ಮತ್ತು ಸೊಸೆ ರೋಷನ್‌ಬೇಗಂ ಇಬ್ಬರೂ ಗೃಹಲಕ್ಷ್ಮಿ ಯೋಜನೆಯ ಒಟ್ಟು ₹44 ಸಾವಿರ ಹಣವನ್ನು ತಮ್ಮ 3 ಎಕರೆ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಲು ಬಳಸಿದ್ದಾರೆ.
‘ಕೊಳವೆಬಾವಿ ಕೊರೆಸಲು ₹60 ಸಾವಿರ ಖರ್ಚಾಗಿದ್ದು, ಉಳಿದ ₹14 ಸಾವಿರ ಹಣವನ್ನು ಮಾಬುಬೀ ಅವರ ಮಗ ನಜೀರ್ ಮಾಲ್ದಾರ್ ಭರಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆ ನಮ್ಮಂತಹ ಬಡ ಕುಟುಂಬಗಳಿಗೆ ಪ್ರಯೋಜನಕಾರಿ ಆಗಿದೆ. ಡಿಸೆಂಬರ್ 10ರಂದು ಕೊಳವೆಬಾವಿ ಕೊರೆಯಿಸಿದ್ದು, ಒಂದೂವರೆ ಇಂಚು ನೀರು ಬಂದಿದೆ ಎಂದು ನಜೀರ್ ಮಾಲ್ದಾರ್ ತಿಳಿಸಿದರು.
ಗೃಹಲಕ್ಷ್ಮಿಹಣದಲ್ಲಿ ಮಹಿಳೆಯರು ತಮಗೆ ಹಾಗೂ ಕುಟುಂಬಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಂದು ಗ್ರಾಮದಲ್ಲಿ ಮಹಿಳೆಯರು ಕೂಡಿಕೊಂಡು ಗೃಹಲಕ್ಷ್ಮೀಹಣದಿಂದ ದೇವಸ್ಥಾನಕ್ಕೆ ರಥ, ಹಿಟ್ಟಿನ ಗಿರಣಿ, ಗ್ರಂಥಾಲಯ ನಿರ್ಮಿಸಿಕೊಟ್ಟ ಉದಾಹರಣೆಗಳು ಸಹ ಇದೆ.
ಅತ್ತೆ-ಸೊಸೆಗೆ ಡಿ.ಕೆ.ಶಿವಕುಮಾರ್ ಶ್ಲಾಘನೆ :
ಟೀಕೆಗಳು ಸಾಯ್ತವೆ, ಕೆಲಸಗಳು ಉಳಿತ್ತವೆ. ವಿರೋಧ ಪಕ್ಷಗಳು ನಮ್ಮ ಗೃಹಲಕ್ಷ್ಮಿಯೋಜನೆಯಿಂದ ಅತ್ತೆ ಸೊಸೆ ನಡುವೆ ಜಗಳ ಉಂಟಾಗುತ್ತದೆ ಎಂದು ಟೀಕೆ ಮಾಡಿದ್ದರು. ಆದರೆ ವಾಸ್ತವವೇ ಬೇರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ರೂ. ಹಣವನ್ನು ಕೂಡಿಟ್ಟು ಕೊಳವೆ ಬಾವಿ ಕೊರೆಸಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ನಮ್ಮ ದೃಢಸಂಕಲ್ಪ ಜನಪರವಾಗಿದ್ದು, ಗ್ಯಾರಂಟಿಗಳಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುವ ಸಾರ್ಥಕತೆ ಇದೆ.
0 Comments