ಮನೆ ನಿರ್ಮಾಣಕ್ಕಾಗಿ ಜೀವಮಾನವಿಡಿ ದುಡಿದು ಕೂಡಿಟ್ಟ ಹಣ ಹಾಗೂ ನಿವೃತ್ತಿಯ ನಂತರ ಬಂದ ಹಣವನ್ನು ಒಟ್ಟುಗೂಡಿಸಿದರೂ ಸಾಲವಿಲ್ಲದೇ ಮನೆ ಕಟ್ಟುವುದು ಕಷ್ಟಸಾಧ್ಯ ಎಂಬ೦ತಾಗಿದೆ. ಇಂಥವರಿಗೆ ಕೇಂದ್ರ ಸರಕಾರದ ಸಾಲ ಮತ್ತು ಸಬ್ಸಿಡಿ ನೀಡುವ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ವರದಾನವಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ 2014ರಿಂದ ಜಾರಿಯಲ್ಲಿದ್ದು; ಪ್ರಾರಂಭವಾದಾಗಿನಿ೦ದ, ಅನೇಕರು ಯೋಜನೆಯ ಮೂಲಕ ಸ್ವಂತ ನಿರ್ಮಾಣದ ಕನಸು ಪೂರೈಸಿಕೊಂಡಿದ್ದಾರೆ. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಸುಮಾರು 40 ಲಕ್ಷ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿದೆ ಎಂದು ಹೇಳಲಾಗುತ್ತಿದೆ.
ಸಾಲ, ಸಬ್ಸಿಡಿ ನೆರವಿನ ವಿವರ
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ, ಪ್ರತಿಯೊಬ್ಬರೂ ತಮ್ಮ ಸ್ವಂತ ಮನೆಯಯನ್ನು ನಿರ್ಮಿಸಲು ಸಾಲ ಸಿಗುವುದರ ಜೊತೆಗೆ ಸರ್ಕಾರದ ಮೂಲಕ ಸಬ್ಸಿಡಿ ಕೂಡ ಪಡೆಯಬಹುದು. ಬ್ಯಾಂಕುಗಳು, ಸರ್ಕಾರಿ ಸಂಸ್ಥೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮೂಲಕ ಈ ಸಬ್ಸಿಡಿ ಸಿಗುತ್ತದೆ. ಸಬ್ಸಿಡಿ ಪಡೆಯಲು ನಿಗದಿಪಡಿಸಿದ ಮಾನದಂಡಗಳು ಈ ಕೆಳಗಿನಂತಿವೆ:
* ಈ ವರ್ಗದ ಕುಟುಂಬದ ಆದಾಯ 6 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಮನೆಯ ವಿಸ್ತೀರ್ಣವು ಆರ್ಥಿಕವಾಗಿ ಹಿಂದುಳಿದ ವರ್ಗ ಸಂದರ್ಭದಲ್ಲಿ 30 ಚದರ ಮೀಟರ್ ಇರಬೇಕು.
* ಈ ವರ್ಗದ ಜನರಿಗೆ ಮಹಿಳೆ ಮನೆಯ ಯಜಮಾನಳಾಗಿರಬೇಕು ಎಂಬ ಷರತ್ತು ಇಲ್ಲ. ಇವರಿಗೆ 9 ಲಕ್ಷ ರೂಪಾಯಿ ವರೆಗೆ ಸಾಲ ಸಿಗುತ್ತದೆ. 2.35 ಲಕ್ಷ ರೂಪಾಯಿ ಗರಿಷ್ಟ ಸಬ್ಸಿಡಿ ಸಿಗುತ್ತದೆ.
(Middle Income Group I) : ಈ ವರ್ಗದ ಅಡಿಯಲ್ಲಿ ಬರುವಂತಹ ಅಭ್ಯರ್ಥಿಗಳ ವಾರ್ಷಿಕ ಆದಾಯವು 12 ಲಕ್ಷ ರೂಪಾಯಿಯಿಂದ 18 ಲಕ್ಷ ರೂಪಾಯಿ ಒಳಗಿರಬೇಕು. ನಿವೇಶನದ ವಿಸ್ತೀರ್ಣವು 160 ಚದರ ಮೀಟರ್ ವರೆಗೆ ಇರಬೇಕು.
* ಈ ವರ್ಗದವರಿಗೆ ಮಹಿಳೆ ಕುಟುಂಬದ ಯಜಮಾನಿ ಆಗಿರುವುದು ಕಡ್ಡಾಯವಲ್ಲ. 12 ಲಕ್ಷ ರೂಪಾಯಿ ವರೆಗೆ ಸಾಲ ಮತ್ತು ಗರಿಷ್ಠ 2.30 ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗುತ್ತದೆ.
(Middle Income Group II) : ಈ ವರ್ಗದ ಅಡಿಯಲ್ಲಿ ಬರುವಂತಹ ಅಭ್ಯರ್ಥಿಗಳ ವಾರ್ಷಿಕ ಆದಾಯವು 18 ಲಕ್ಷ ಮೇಲಿರಬಾರದು. ಮಹಿಳೆಯನ್ನು ಹೊಂದಿರುವುದು ಕಡ್ಡಾಯವಲ್ಲ. ಕಾರ್ಪೆಟ್ ಪ್ರದೇಶವು 200 ಚದರ ಮೀಟರ್ ವರೆಗೆ ಇರಬೇಕು.
* ಈ ವರ್ಗದ ಫಲಾನುಭವಿಗಳಿಗೂ ಕೂಡ 12 ಲಕ್ಷ ರೂಪಾಯಿ ವರೆಗೆ ಸಾಲ ಮತ್ತು ಗರಿಷ್ಠ 2.30 ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು
* ಅರ್ಜಿದಾರರ ಆಧಾರ್ ಕಾರ್ಡ್
* ವಿಳಾಸ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಮೊಬೈಲ್ ನಂಬರ್
* ಬ್ಯಾಂಕ್ ಖಾತೆ ಪುಸ್ತಕ
* ಪಾಸ್ಪೋರ್ಟ್ ಸೈಜ್ ಫೋಟೋ
ಅರ್ಜಿ ಸಲ್ಲಿಸುವ ವಿಧಾನ
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಕೆಳಗಿನ ಲಿಂಕ್ ಬಳಸಿಕೊಂಡು ನಿಮ್ಮ ಮೊಬೈಲ್’ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಲಿಂಕ್:https://pmaymis.gov.in/
0 Comments