Ticker

6/recent/ticker-posts

ವಿಧಾನ ಪರಿಷತ್ತಿನ ವಿವಿಧ ಹುದ್ದೆಗಳಿಗೆ ಕೆಇಎ ನೇಮಕಾತಿ..


ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪರಿಷ್ಕೃತ ಅರ್ಜಿ ಆಹ್ವಾನಿಸಿದೆ. ಕಳೆದ ಮಾರ್ಚ್​ನಲ್ಲಿ ಹೊರಡಿಸಲಾದ ಅಧಿಸೂಚನೆಗೆ ವಯೋಮಿತಿ ಸಡಿಲಿಸಿ ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ.

ಹುದ್ದೆಗಳ ವಿವರ:

* ಸೀನಿಯರ್​ ಪ್ರೋಗ್ರಾಮರ್​​ - 2

* ಜೂನಿಯರ್​ ಪ್ರೋಗ್ರಾಮರ್​​​ - 2

*ಜೂನಿಯರ್​ ಕನ್ಸೋಲ್​ ಆಪರೇಟರ್​​ - 4

*ಕಂಪ್ಯೂಟರ್​ ಆಪರೇಟರ್​ - 4

*ಸಹಾಯಕರು - 3

*ಕಿರಿಯ ಸಹಾಯಕರು - 8

*ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು -5

ಕೋಳಿ, ಕುರಿ-ಮೇಕೆ ಸಾಕಾಣಿಕೆ ಮಾಡಲು 25 ಲಕ್ಷ ಸಹಾಯಧನ ;ಉತ್ತಮವಾದ ಯೋಜನೆ..ಹೇಗೆ ಅರ್ಜಿ ಹಾಕಬಹುದು? ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಕಿಕ್ ಮಾಡಿ


ವಿದ್ಯಾರ್ಹತೆ:

* ಸೀನಿಯರ್​ ಪ್ರೋಗ್ರಾಮರ್​​ - ಸಿಎಸ್​​, ಐಎಸ್​ ಅಥವಾ ಎಲೆಕ್ಟ್ರಾನಿಕ್ ಆ್ಯಂಡ್​ ಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ.

* ಜೂನಿಯರ್​ ಪ್ರೋಗ್ರಾಮರ್​​​ ಸಿಎಸ್​​, ಐಎಸ್​ ಅಥವಾ ಎಲೆಕ್ಟ್ರಾನಿಕ್ ಆ್ಯಂಡ್​ ಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ.

* ಜೂನಿಯರ್​ ಕನ್ಸೋಲ್​ ಆಪರೇಟರ್​ ಸಿಎಸ್​​, ಐಎಸ್​ ಅಥವಾ ಎಲೆಕ್ಟ್ರಾನಿಕ್ ಆ್ಯಂಡ್​ ಕಮ್ಯೂನಿಕೇಷನ್​ನಲ್ಲಿ ಇಂಜಿನಿಯರಿಂಗ್​ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷ ಅನುಭವ

* ಕಂಪ್ಯೂಟರ್​ ಆಪರೇಟರ್​ ಬಿಸಿಎ ಅಥವಾ ಸಿಎಸ್​​, ಎಲೆಕ್ಟ್ರಾನಿಕ್ಸ್​ನಲ್ಲಿ ಬಿಎಸ್​ಸಿ ಪದವಿ

* ಸಹಾಯಕರು ಕಾನೂನು- ಪದವಿ

* ಕಿರಿಯ ಸಹಾಯಕರು- ಪದವಿ

ದತ್ತಾಂಶ ನಮೂದು ಸಹಾಯಕರು/ಬೆರಳಚ್ಚುಗಾರರು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ, ಕೆಎಸ್​​ಇಇಬಿಯ ಬೆರಳಚ್ಚುಗಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ: ಗರಿಷ್ಠ ವಯೋಮಿತಿ 38 ವರ್ಷ. ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ. ವಿಶೇಷಚೇತನ ಅಭ್ಯರ್ಥಿಗಳಿಗೆ 250 ರೂ., ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ. ಇತರೆ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕವಿದೆ.

ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ.

ಡಿಸೆಂಬರ್​ 4ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಜನವರಿ 3 ಕೊನೇಯ ದಿನ. 

ಅಧಿಸೂಚನೆ:

Post a Comment

0 Comments