Ticker

6/recent/ticker-posts

ಕೆಕೆಆರ್‌ಟಿಸಿ ಚಾಲಕರು, ತಾಂತ್ರಿಕ ಸಹಾಯಕರು ಹುದ್ದೆಗಳ ನೇಮಕ: ನೇರ ಸಂದರ್ಶನಕ್ಕೆ ಆಹ್ವಾನ


ಕೆಕೆಆರ್‌ಟಿಸಿ 100 ಡ್ರೈವರ್ ಹುದ್ದೆಗಳಿಗೆ ಹಾಗೂ 50 ಟೆಕ್ನಿಕಲ್ ಅಸಿಸ್ಟಂಟ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು, ಅರ್ಹರು ಮತ್ತು ಆಸಕ್ತರನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳಲ್ಲ. ಬದಲಾಗಿ ತುರ್ತಾಗಿ ನೇಮಕ ಮಾಡುತ್ತಿರುವ ಅಗತ್ಯ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ. ಆಸಕ್ತರು ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗದ ವಿವಿಧ ಘಟಕಗಳಲ್ಲಿ ತುರ್ತಾಗಿ ಅಗತ್ಯ ಇರುವ ಚಾಲಕರ ಹುದ್ದೆಗಳು ಹಾಗೂ ತಾಂತ್ರಿಕ ಸಹಾಯಕರ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗುವ ಮೂಲಕ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

* ಚಾಲಕರ ಒಟ್ಟು ಹುದ್ದೆಗಳ ಸಂಖ್ಯೆ:100

* ತಾಂತ್ರಿಕ ಸಹಾಯಕರ ಒಟ್ಟು ಹುದ್ದೆಗಳ ಸಂಖ್ಯೆ:50

ಪಿಯುಸಿ ಪಾಸಾದವರಿಗೆ ರಾಜ್ಯ ಸರ್ಕಾರದಿಂದ ಕೌಶಲ್ಯ ತರಬೇತಿ.. ಐಟಿ ಕಂಪನಿಗಳಲ್ಲಿ ಉದ್ಯೋಗ ಅವಕಾಶ.ಹೇಗೆ ಅರ್ಜಿ ಸಲ್ಲಿಸುದು? ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ದಿನಾಂಕ 02-12-2024 ರಿಂದ 04-12-2024ರ ವರೆಗೆ ಚಾಲಕರ ಹುದ್ದೆಗೆ ಹಾಗೂ 06-12-2024 ರಿಂದ 07-12-2024ರ ವರೆಗೆ ತಾಂತ್ರಿಕ ಸಹಾಯಕ ಹುದ್ದೆಗೆ ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಛೇರಿಯ ಕಛೇರಿ ಸಮಯದಲ್ಲಿ ನೇರ ಸಂದರ್ಶನ ನಡೆಸಲಾಗುತ್ತದೆ.

ಬಸ್ ಚಾಲಕರು ಹಾಗೂ ತಾಂತ್ರಿಕ ಸಹಾಯಕರು ಹುದ್ದೆಗಳಿಗೆ ಅಭ್ಯರ್ಥಿಗಳು ಹಾಜರುಪಡಿಸಬೇಕಾದ ದಾಖಲಾತಿಗಳು ಮತ್ತು ಅನುಸರಿಸಬೇಕಾದ ಷರತ್ತು ನಿಬಂಧನೆಗಳ ಕುರಿತ ವಿವರಗಳಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಅಧಿಸೂಚನೆಯನ್ನು:ಇಲ್ಲಿ ಕ್ಲಿಕ್ ಮಾಡಿ

ವೆಬ್‌ಸೈಟ್:ಇಲ್ಲಿ ಕ್ಲಿಕ್ ಮಾಡಿ



Post a Comment

0 Comments