ಇತ್ತಿಚೀನ ದಿನಗಳಲ್ಲಿ ಬಹುತೇಕ ಗ್ರಾಮೀಣ ಮತ್ತು ನಗರ ಪ್ರದೇಶದ ಮನೆಗಳಲ್ಲಿ ಅಡುಗೆ ತಯಾರಿಕೆಗೆ ಗ್ಯಾಸ್ ಸಿಲಿಂಡರ್ ಗಳಲ್ಲೇ(Free Gas) ಬಳಕೆ ಮಾಡಲಾಗುತ್ತದ್ದು, ಅರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಅನ್ನು ಹೊಂದಲು ನೆರವಾಗಲು ಕೇಂದ್ರ ಸರಕಾರದಿಂದ ಉಜ್ವಲ 2.0 ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟಾವ್ ಅನ್ನು ನೀಡಲಾಅಗುತ್ತದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
18 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಅಂತಹ ಮಹಿಳೆಯರ ಕುಟುಂಬಲ್ಲಿ ಬೇರೆ ಯಾರೊಬ್ಬರ ಹೆಸರಿನಲ್ಲಿಯೂ ಗ್ಯಾಸ್ ಸಂಪರ್ಕ ಇರಬಾರದು. ಈ ಅರ್ಹತೆಯುಳ್ಳ ಎಲ್ಲಾ ಮಹಿಳೆಯರು ಈ ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್
ಬಿಪಿಎಲ್ ರೇಷನ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಪಾಸ್ ಪೋರ್ಟ್ ಸೈಜ್ ಫೋಟೋ
ಜಾತಿ ಪ್ರಮಾಣ ಪತ್ರ
ವಿಳಾಸ ಪ್ರಮಾಣ ಪತ್ರ
How to apply for Ujjwala yojana- ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅರ್ಜಿದಾರರು ಎರಡು ವಿಧಾನವನ್ನು ಅನುಸರಿಸಿ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ (PMUY) ಅಡಿಯಲ್ಲಿ ಉಚಿತ ಗ್ಯಾಸ್ ಮತ್ತು ಸಿಲಿಂಡರ್ ಅನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
ವಿಧಾನ-1: ಗ್ಯಾಸ್ ಸಿಲಿಂಡರ್ ಸರಬರಾಜು ಏಜೆನ್ಸಿಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು:
ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ಯಾಸ್ ಸಿಲಿಂಡರ್ ಸರಬರಾಜು ಏಜೆನ್ಸಿಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
ವಿಧಾನ-2:
ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಅಧಿಕೃತ ಈ ಯೋಜನೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಲಿಂಕ್:https://pmuy.gov.in/kn/
0 Comments