ಭಾರತದ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಿಂದ ವಿವಿಧ 61 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳನ್ನು ಐಪಿಪಿಬಿ'ಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ಭದ್ರತೆ ವಿಭಾಗದಲ್ಲಿ ಭರ್ತಿ ಮಾಡಲಾಗುತ್ತದೆ. ಐಟಿ ಕ್ಷೇತ್ರದ ಪದವಿ, ಸ್ನಾತಕೋತ್ತರ ಪದವಿ ಪಾಸಾದವರು ಈ ಹುದ್ದೆಗಳಿಗೆ ಅರ್ಹರು. ಕೇಂದ್ರ ಸರ್ಕಾರಿ ಹುದ್ದೆಗಳು ಇವಾಗಿವೆ. ಆದರೆ ಕೆಲವು ಹುದ್ದೆಗಳನ್ನು ಖಾಯಂ ಆಗಿ, ಕೆಲವು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಬ್ಯಾಕ್‌ಲಾಗ್ ಮೀಸಲಾತಿ ಖಾಲಿ ಹುದ್ದೆಗಳು ಒಳಗೊಂಡಂತೆ ನಿಯಮಿತ ಖಾಲಿ ಹುದ್ದೆಗಳ (ಸಂಭಾವ್ಯ) ಸಂಖ್ಯೆಯ ವಿವರಗಳು ಕೆಳಗಿನಂತಿವೆ ನೋಡಿ.
* ಸಹಾಯಕ ವ್ಯವಸ್ಥಾಪಕರು - ಐಟಿ 54
* ವ್ಯವಸ್ಥಾಪಕರು - ಐಟಿ (ಪಾವತಿ ವ್ಯವಸ್ಥೆಗಳು) 01
* ವ್ಯವಸ್ಥಾಪಕರು - ಐಟಿ ( ಮೂಲ ಸೌಕರ್ಯ, ನೆಟ್‌ವರ್ಕ್ ಮತ್ತು ಕ್ಲೌಡ್ ) 02
* ವ್ಯವಸ್ಥಾಪಕರು - ಐಟಿ ( ಎಂಟರ್‌ಪ್ರೈಸ್ ಡಾಟಾವೇರ್ ಹೌಸ್ ) 01
* ಹಿರಿಯ ವ್ಯವಸ್ಥಾಪಕರು-ಐಟಿ (ಪಾವತಿ ವ್ಯವಸ್ಥೆಗಳು ) 01
*ಹಿರಿಯ ವ್ಯವಸ್ಥಾಪಕರು - ಐಟಿ ( ಮೂಲ ಸೌಕರ್ಯ, ನೆಟ್‌ವರ್ಕ್ ಮತ್ತು ಕ್ಲೌಡ್ ) 01
*ಹಿರಿಯ ವ್ಯವಸ್ಥಾಪಕರು - ಐಟಿ ( ಮಾರಾಟಗಾರರು, ಹೊರಗುತ್ತಿಗೆ, ಗುತ್ತಿಗೆ ನಿರ್ವಹಣೆ, ಖರೀದಿ, ಎಸ್‌ಎಲ್‌ವಿ, ಪಾವತಿ ) 01
*ಸೈಬರ್ ಸೆಕ್ಯೂರಿಟಿ ತಜ್ಞ 01
ವಿದ್ಯಾರ್ಹತೆ
ಈ ಮೇಲಿನ ಹುದ್ದೆಗಳನ್ನು ಎಲ್ಲವನ್ನು ಸಹ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ಭದ್ರತೆ ವಿಭಾಗದಲ್ಲಿ ಭರ್ತಿ ಮಾಡುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಬಿಇ, ಬಿ.ಟೆಕ್, ಎಂ.ಟೆಕ್, ಎಂಸಿಎ, ಬಿಸಿಎ ನಲ್ಲಿ ಐಟಿ ವಿಷಯಗಳನ್ನು / ಸೈಬರ್ ಸೆಕ್ಯೂರಿಟಿ ವಿಷಯಗಳನ್ನು ಓದಿದವರು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಅರ್ಜಿಗಳ ಆನ್‌ಲೈನ್ ನೋಂದಣಿ ಆರಂಭ ದಿನಾಂಕ: 21-12-2024
ಶುಲ್ಕಸಹಿತ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 10-01-2025 ರ ರಾತ್ರಿ 11-59 ಗಂಟೆವರೆಗೆ.
ಭಾರತದ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್:Click ಮಾಡಿ
0 Comments