ಈ ವರದಿಯಲ್ಲಿ ಅಂಗನವಾಡಿ ನೇಮಕಾತಿ 2025 (Anganwadi Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದು. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ(Anganwadi Workers and Helpers) ಗೌರವ ಸೇವಾ ಹುದ್ದೆಗಳಿಗೆ ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ವಡಗೇರಾ ತಾಲ್ಲೂಕುಗಳಲ್ಲಿ 48 ಕಾರ್ಯಕರ್ತೆ ಹಾಗೂ 76 ಸಹಾಯಕಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರೂ, ಆನೈನ್ ತಂತ್ರಾಂಶದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳ (technical issues) ಕಾರಣ ಕೆಲವು ಅಭ್ಯರ್ಥಿಗಳ ಅರ್ಜಿಗಳು ಸಂಪೂರ್ಣವಾಗಿ ಸಲ್ಲಿಕೆಯಾಗಿಲ್ಲ. ಈ ಹಿನ್ನೆಲೆ, ಸರ್ಕಾರವು ತಾಂತ್ರಿಕ ಸಮಸ್ಯೆ ಅನುಭವಿಸಿದ ಅಭ್ಯರ್ಥಿಗಳಿಗೆ ಪುನಃ ಅವಕಾಶ ನೀಡಲು ನಿರ್ಧರಿಸಿದೆ.
ಪ್ರಮುಖ ದಿನಾಂಕಗಳು:
ಅರ್ಜಿಯನ್ನು ಪೂರ್ಣಗೊಳಿಸಲು 2024 ಡಿಸೆಂಬರ್ 26 ರಿಂದ 2025 ಜನವರಿ 5ರ ಮಧ್ಯಾಹ್ನ 5:30ರೊಳಗೆ ಅವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯನ್ನು ಅರ್ಜಿ ಸಲ್ಲಿಸಲು,Click ಮಾಡಿ👉 https://karnemakaone.kar.nic.in/abcd/
0 Comments