ಪಡಿತರ ಚೀಟಿ/ರೇಷನ್ ಕಾರ್ಡ ನಲ್ಲಿ ತಪ್ಪಾಗಿ ದಾಖಲಾಗಿರುವ ಮಾಹಿತಿಯನ್ನು ಅಥವಾ ವಿಳಾಸ ಮತ್ತು ಸದಸ್ಯರ ವಿವರವನ್ನು ತಿದ್ದುಪಡಿ(Ration card tiddupadi)/ಬದಲಾವಣೆ ಮಾಡಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಆಹಾರ ಇಲಾಖೆಯಿಂದ ಪ್ರತಿ ತಿಂಗಳು ಸರಿಯಾಗಿ ಉಚಿತವಾಗಿ ಆಹಾರ ಧಾನ್ಯಗಳಾದ ಅಕ್ಕಿ, ರಾಗಿ ಇತರರೆ ಉತ್ಪನ್ನಗಳನ್ನು ನ್ಯಾಯಬೆಲೆ ಅಂಗಡಿಗಳಿಂದ(Ration card correction) ಪಡೆಯಲು ಗ್ರಾಹಕರ ವಿವರವು ರೇಷನ್ ಕಾರ್ಡ/ಪಡಿತರ ಚೀಟಿಯಲ್ಲಿ ಸರಿಯಾಗಿ ದಾಖಲಾಗಿರುವುದು ಕಡ್ಡಾಯವಾಗಿರುವ ಕಾರಣ ತಪ್ಪಾದ ವಿವರ ಹೊಂದಿರುವ ಸಾರ್ವಜನಿಕರು ತಮ್ಮ ವಿವರವನ್ನು ಸರಿಪಡಿಸಿಕೊಳ್ಳಲು ಇಲಾಖೆಯಿಂದ ಅವಕಾಶ ನೀಡಲಾಗಿದೆ.
ಪಡಿತರ ಚೀಟಿ ತಿದ್ದುಪಡಿಗೆ ಎಲ್ಲಿ ಅರ್ಜಿ(Ration card correction application) ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ಎಷ್ಟು ದಿನ ಕಾಲಾವಕಾಶ ನೀಡಲಾಗಿದೆ? ಇತ್ಯಾದಿ ಸಂಪೂರ್ಣ ವಿವರ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
(2) ರೇಷನ್ ಕಾರ್ಡ ಪ್ರತಿ
(3) ರೇಶನ್ ಕಾರ್ಡ ಸದಸ್ಯರು ಹಾಜರು ಇರಬೇಕು
(4) ಮೊಬೈಲ್ ನಂಬರ್
ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ?
(1) ರೇಷನ್ ಕಾರ್ಡಗೆ ಹೊಸ ಸದಸ್ಯರ ಸೇರ್ಪಡೆ ಮಾಡಲು ಅವಕಾಶ ನೀಡಲಾಗಿದೆ.
(2) ಹೆಸರು ತೆಗೆಯುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
(3) ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.
(4) ನ್ಯಾಯಬೆಲೆ ಅಂಗಡಿ ಬದಲಾವಣೆಗೂ ಸಹ ಅರ್ಜಿ ಸಲ್ಲಿಸಬಹುದು.
(5) ರೇಷನ್ ಕಾರ್ಡ ಇ-ಕೆವೈಸಿ ಮಾಡಲು ಸಹ ಅವಕಾಶ ನೀಡಲಾಗಿದೆ.
ಕೊನೆಯ ದಿನಾಂಕ:
ಅರ್ಹ ಅರ್ಜಿದಾರರು ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಲು 31 ಡಿಸೆಂಬರ್ 2024 ಕೊನೆಯ ದಿನಾಂಕವಾಗಿರುತ್ತದೆ.
0 Comments