Ticker

6/recent/ticker-posts

ರೇಷನ್ ಕಾರ್ಡ್ ತಿದ್ದುಪಡಿಗೆ ಇನ್ನು 7 ದಿನಗಳ ಮಾತ್ರ ಬಾಕಿ ಅವಕಾಶ..


ರೇಷನ್ ಕಾರ್ಡ್ ತಿದ್ದುಪಡಿಗೆ ಇನ್ನು 7 ದಿನಗಳ ಮಾತ್ರ ಬಾಕಿ  ಅವಕಾಶವಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಬಯೋಮೆಟ್ರಿಕ್ ಸೌಲಭ್ಯ ಇರುವ ಬೆಂಗಳೂರು ಒನ್ (Bangalore One), ಕರ್ನಾಟಕ ಒನ್ (karnataka One) ಹಾಗೂ ಗ್ರಾಮ ಒನ್‌ ಕೇಂದ್ರಗಳಲ್ಲಿ (Grama One Center) ಪಡಿತರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಸೇರ್ಪಡೆ ಮಾಡುವುದಕ್ಕೆ

* ಬಿಪಿಎಲ್ ಕಾರ್ಡಿಗೆ ಸದಸ್ಯರ ಸೇರ್ಪಡೆ ಮಾಡುವುದಕ್ಕೆ ಆದಾಯ ಪ್ರಮಾಣಪತ್ರ ಕಡ್ಡಾಯವಾಗಿದೆ. ಆದರೆ 6ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸೇರ್ಪಡೆಗೆ ಆದಾಯ ಪ್ರಮಾಣಪತ್ರದ ಅವಶ್ಯಕತೆ ಇರುವುದಿಲ್ಲ.ಬದಲಾಗಿ ಯಾವುದೇ ಪಡಿತರ ಚೀಟಿಯಾಗಿದ್ದರೂ ಮಕ್ಕಳ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಕಡ್ಡಾಯವಾಗಿರುತ್ತದೆ.

* ಎಪಿಎಲ್ ಪಡಿತರ ಚೀಟಿ ಸದಸ್ಯರ ಸೇರ್ಪಡೆಗೆ ಆದಾಯ ಪ್ರಮಾಣಪತ್ರದ ಅವಶ್ಯಕತೆ ಇರುವುದಿಲ್ಲ. ಆಧಾರ್ ಕಾರ್ಡ್ ಕಡ್ಡಾಯ.ಒಟಿಪಿ ಮುಕಾಂತರ ಮಾಡಬಹುದು

ಡಿಲೀಟ್ ಮಾಡಬೇಕಾದಲ್ಲಿ :-

* ಆಧಾರ್ ಕಾರ್ಡಿನಲ್ಲಿ ವಿಳಾಸ ಬೇರೆ ವಿಳಾಸಕ್ಕೆ ಬದಲಾವಣೆ ಆಗಿರಬೇಕು. ಉದಾ:- ಸದಸ್ಯೆಯನ್ನು ವಿವಾಹ ಮಾಡಿಕೊಟ್ಟಿದ್ದಲ್ಲಿ, ಆಕೆಯ ಆಧಾರ್ ಕಾರ್ಡ್ ವಿಳಾಸ/ ಜಾತಿ ಆದಾಯ ಪ್ರಮಾಣ ಪತ್ರ ಗಂಡನ ಮನೆಯ ವಿಳಾಸಕ್ಕೆ ಬದಲಾವಣೆ ಆಗಿರಲೇಬೇಕು.

* ಸದಸ್ಯರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣಪತ್ರ ಕಡ್ಡಾಯವಾಗಿ ನೀಡತಕ್ಕದ್ದು.

* ಹೊಸ ಸದಸ್ಯರನ್ನು ಸೇರ್ಪಡೆ ಮಾಡಬೇಕಾದಲ್ಲಿ ಸೇರ್ಪಡೆ ಮಾಡಬೇಕಾದ ವ್ಯಕ್ತಿ, ಜೊತೆಗೆ ಈಗಾಗಲೇ ಪಡಿತರ ಚೀಟಿಯಲ್ಲಿ ಹೆಸರು ಇರುವ ಒಬ್ಬ ಸದಸ್ಯರು ಬರಬೇಕು.


Post a Comment

0 Comments