ರಾಜ್ಯದಲ್ಲಿ ಬರೋಬ್ಬರಿ 5,000 ಸರ್ಕಾರಿ ನೌಕರರು ಹೀಗೆ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದು, ಕಳೆದ 8-10 ವರ್ಷಗಳಿಂದ ಪಡಿತರ ಸೇರಿದಂತೆ, ಇತರ ಸವಲತ್ತುಗಳನ್ನು ಪಡೆದಿರುವುದು ಪತ್ತೆಯಾಗಿದೆ. ಹೀಗಾಗಿ ಈ ಎಲ್ಲ ನೌಕರರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸರ್ಕಾರ ನೋಟಸ್ ಜಾರಿ ಮಾಡುತ್ತಿದೆ.
ಬಿಪಿಎಲ್ ಕಾರ್ಡ್ ಪಡೆದಿರುವ ಸರ್ಕಾರಿ ನೌಕರರು ಸೇವೆಗೆ ಸೇರಿದ ದಾಖಲೆ ಇನ್ನಿತರ ಮಾಹಿತಿಗಳನ್ನು ಆಹಾರ ಇಲಾಖೆಗೆ ಸಲ್ಲಿಸಬೇಕಿದೆ. ಈ ಮಾಹಿತಿಯನ್ನು ಪರಿಶೀಲಿಸಿ ದಂಡ ಪಾವತಿಸುವಂತೆ ನಿರ್ದೇಶನ ನೀಡಲಾಗುತ್ತದೆ. ಅನೇಕರು ತಪ್ಪು ಒಪ್ಪಿಕೊಂಡು ದಂಡ ಪಾವತಿ ಮಾಡುತ್ತಿದ್ದಾರೆ.
ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವ ಸರ್ಕಾರಿ ನೌಕರರಿಗೆ ಮೊದಲ ಹಂತದಲ್ಲಿ ನೋಟಿಸ್ ಜಾರಿ ಮಾಡಲಾಗುತ್ತಿದೆ. ಆನಂತರ ಈತನಕ ಪಡೆದ ಪಡಿತರಕ್ಕೆ ದಂಡ ನಿಗದಿ ಮಾಡಲಾಗುತ್ತದೆ. ಎಷ್ಟು ವರ್ಷಗಳಿಂದ ಪಡಿತರ ಪಡೆದಿದ್ದಾರೆಂಬ ಲೆಕ್ಕಾಚಾರ ಹಾಕಿ ಅಷ್ಟು ಪಡಿತರಕ್ಕೆ ಮಾರುಕಟ್ಟೆ ಮೌಲ್ಯ ನಿಗದಿ ಮಾಡಿ ಅದರ ದುಪ್ಪಟ್ಟು ದಂಡ ವಸೂಲಿ ಮಾಡಲಾಗುತ್ತದೆ.
0 Comments