ನೀವೇನಾದರು ಕೋಳಿ,ಕುರಿ,ಮೇಕೆ,ಹಂದಿ, ರಸಮೇವು ಘಟಕ ಮಾಡುವ ಆಸಕ್ತಿಯಿದ್ದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ (NLM EDP) ಈ ಯೋಜನೆಯಡಿ ಶೇ 50% ಸಹಾಯಧ ಪಡೆಯಬಹುದಾಗಿದೆ.
ಈ ಕಾರ್ಯಕ್ರಮದಡಿ ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದ್ದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದಾಗಿದೆ ಎಂದು ಪಶುಸಂಗೋಪನೆ ಇಲಾಖೆಯ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಘಟಕಗಳ ವಿವರ
* ಗ್ರಾಮೀಣ ಕೋಳಿ ಉದ್ದಿಮೆ ಅಭಿವೃದ್ಧಿ (1000 ದೇಶಿ ಮಾತೃಕೋಳಿ ಘಟಕ + ಹ್ಯಾಚರಿ ಘಟಕ + ಮರಿಗಳ ಸಾಕಾಣಿಕೆ ಘಟಕ)
ಘಟಕದ ವೆಚ್ಚ : 34,75,540-/
ಸಹಾಯಧನ : ಶೇ.50ರಷ್ಟು, ಒಂದು ಘಟಕಕ್ಕೆ ಗರಿಷ್ಠ ರೂ.25 ಲಕ್ಷ
* ಕುರಿ-ಮೇಕೆ ತಳಿ ಸಂವರ್ಧನಾ ಘಟಕ (500+25)
ಘಟಕದ ವೆಚ್ಚ : 87,30,00-/
ಸಹಾಯಧನ : ಶೇ.50ರಷ್ಟು, ಒಂದು ಘಟಕಕ್ಕೆ ಗರಿಷ್ಠ ರೂ.50 ಲಕ್ಷ
* ಹಂದಿ ತಳಿ ಸಂವರ್ಧನಾ ಘಟಕ (100+10)
ಘಟಕ ವೆಚ್ಚ : ಶೇ.50ರಷ್ಟು, ಒಂದು ಘಟಕಕ್ಕೆಳಿ ಗರಿಷ್ಠ ರೂ.30 ಲಕ್ಷ
ಸಹಾಯಧನ : 50,29,400-/
*ರಸಮೇವು ಉತ್ಪಾದನಾ ಘಟಕ ( 2000-2500 . ಉತ್ಪಾದನೆ)
ಘಟಕ ವೆಚ್ಚ : ಶೇ.50ರಷ್ಟು, ಒಂದು ಘಟಕಕ್ಕೆ ಗರಿಷ್ಠ ರೂ.50 ಲಕ್ಷ
ಸಹಾಯಧನ : 50,000,00-/
ಸಲ್ಲಿಸಬೇಕಾದ ದಾಖಲಾತಿಗಳು
* ಯೋಜನಾ ವರದಿ
* ಭೂ ದಾಖಲೆಗಳು
*ಘಟಕ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದ ಜಿಪಿಎಸ್ ಫೋಟೋ
*ಪ್ಯಾನ್ ಕಾರ್ಡ್
*ಆಧಾರ್ ಕಾರ್ಡ್
*ಚುನಾವಣೆ ಗುರುತಿನ ಚೀಟಿ
*3 ವರ್ಷಗಳ ಆದಾಯ ತೆರಿಗೆ ಪಾವತಿಸಿರುವ ವರದಿ
*6 ತಿಂಗಳ ಬ್ಯಾಂಕ್ ವಹಿವಾಟು ವಿವರ
*ಪಾಸ್ ಪೋರ್ಟ್ ಅಳತೆಯ ಫೋಟೋ
*ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ
* ತರಬೇತಿ ಪ್ರಮಾಣ ಪತ್ರ
* ಅನುಭವ ಹೊಂದಿರುವ ಕುರಿತು ಪ್ರಮಾಣ ಪತ್ರ
ಅರ್ಜಿ ಸಲ್ಲಿಸಲು:ಇಲ್ಲಿ ಕ್ಲಿಕ್ ಮಾಡಿ
0 Comments