Ticker

6/recent/ticker-posts

ಪೊಲೀಸ್‌ ಇಲಾಖೆಯ 2400 KSRP ಕಾನ್ಸ್‌ಟೇಬಲ್‌ ನೇಮಕಕ್ಕೆ ಸರ್ಕಾರ ಆದೇಶ..

 


ಪೊಲೀಸ್‌ ಇಲಾಖೆಯು ಕೆಎಸ್‌ಆರ್‌ಪಿ ಬೆಟಾಲಿಯನ್‌ನಲ್ಲಿ ಒಟ್ಟು 2400 ಹೊಸ ಸಿಬ್ಬಂದಿ ನೇಮಕಾತಿಗೆ ಮುಂದಾಗಿದೆ. ಇದಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿ ಆದೇಶ ಹೊರಡಿಸಿದೆ. ಶೀಘ್ರದಲ್ಲೇ ನೋಟಿಫಿಕೇಶನ್‌ ಬಿಡುಗಡೆ ಮಾಡುವ ಎಲ್ಲ ಸಾಧ್ಯತೆಗಳಿವೆ. ಸರ್ಕಾರಿ ಉದ್ಯೋಗಬೇಕು. ಅದರಲ್ಲೂ ಪೊಲೀಸ್‌ ಇಲಾಖೆ ಸೇವೆಗೆ ಸೇರಬೇಕು ಎಂದುಕೊಂಡಿರುವವರು ಈ ಹುದ್ದೆಗಳಿಗೆ ಬೇಕಾದ ಸಿದ್ದತೆ ನಡೆಸಿ.

ಕರ್ನಾಟಕ ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದ ರಾಜ್ಯದ ನಿರುದ್ಯೋಗಿ ಹಾಗೂ ಪೊಲೀಸ್‌ ಇಲಾಖೆ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಅನ್ನು ಇದೀಗ ನೀಡಿದೆ. ಬರೋಬರಿ 2400 ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಕ್ಕೆ ಪೊಲೀಸ್‌ ಇಲಾಖೆಗೆ ಆದೇಶ ನೀಡಿದೆ.

ಯಾರಿಗೆಲ್ಲ ಅವಕಾಶ ಸಿಗಲಿದೆ?

ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು; ಬಹುದಿನಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ರಾಜ್ಯದಲ್ಲಿ ಆಗಾಗ ನಡೆಯುವ ಬಂದ್‌ಗಳು, ಪ್ರತಿಭಟನೆಗಳು, ಚುನಾವಣೆಗಳು ಹಾಗೂ ಗಣ್ಯರ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಬಂದೋಬಸ್ತ್ ಕೆಲಸಗಳಿಗೆ ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ಬೆಟಾಲಿಯನ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತದೆ.

Post a Comment

0 Comments