ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 223 ಗ್ರಾಮ ಪಂಚಾಯತ್‌ಗಳಿದ್ದು ಇವುಗಳಲ್ಲಿ 258 ವಿವಿಧ ಹುದ್ದೆಗಳು ಖಾಲಿ ಇರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆಯವರು ಮಾಹಿತಿ ನೀಡಿದ್ದಾರೆ. ವಿಧಾನಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಪುತ್ತೂರುರವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
ಗ್ರಾಮ ಪಂಚಾಯತ್ಸಿ ಬ್ಬಂದಿ ನೇಮಕಾತಿಯ ಅಧಿಕಾರವನ್ನು ಗ್ರಾಮ ಪಂಚಾಯತಿಯಿಂದ ಜಿಲ್ಲಾ ಪಂಚಾಯತ್ ಸಿಇಒ ನೇತೃತ್ವದ ಸಮಿತಿಗೆ ವರ್ಗಾಯಿಸಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇಮಕಾತಿ ಮಾಡಿಕೊಂಡ ಗ್ರಾಮ ಪ೦ಚಾಯತಿ ಸಿಬ್ಬಂದಿ ಮತ್ತು ಪ್ರಸ್ತುತ ಖಾಲಿ ಇರುವ ಸಿಬ್ಬಂದಿಗಳ ಸಂಖ್ಯೆಯನ್ನು ನೀಡುವಂತೆ ಕಿಶೋರ್ ಕುಮಾರ್‌ರವರು ಕೇಳಿಕೊಂಡಿದ್ದರಲ್ಲದೆ ಖಾಲಿ ಹುದ್ದೆಗಳಿಗೆ ನೇಮಕಾತಿಗೆ ಆಗ್ರಹಿಸಿದ್ದರು.
ಇದಕ್ಕೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆಯವರು, ಗ್ರಾಮ ಪಂಚಾಯತ್ ಗಳಿಗೆ ಸಂಬಂಧಿಸಿದ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಲುವಾಗಿ ಆಯಾ ಜಿಲ್ಲೆಗಳಲ್ಲಿ ಸಂಬಂಧಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲು ಅವಕಾಶವಿರುತ್ತದೆ. ನೇಮಕಾತಿ ಪ್ರಾಧಿಕಾರವು ಸಂಬಂಧಿಸಿದ ಗ್ರಾಮ ಪಂಚಾಯತ್ ಆಗಿರುತ್ತದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಪಂಚಾಯತ್‌ಗಳಲ್ಲಿ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಿದ ಸಚಿವರು ಬಿಲ್ ಕಲೆಕ್ಟರ್ 13, ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್ 18, ವಾಟರ್ ಅಪರೇಟರ್ 72, ಕ್ಲೀನರ್ಸ್ 81 ಮತ್ತು ಅಟೆಂಡಂಟ್ 74 ಹುದ್ದೆ ಖಾಲಿ ಎಂದು ಮಾಹಿತಿ ನೀಡಿದ್ದಾರೆ.
ಹೊಸ ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯ ಗ್ರಾಮ ಪಂಚಾಯತಿ ಹುದ್ದೆಗಳ ಆಯ್ಕೆ ಸಮಿತಿಯ ಮೂಲಕ ಯಾವುದೇ ಹೊಸ ನೇಮಕಾತಿಗಳನ್ನು ಮಾಡಿಕೊಂಡಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಗ್ರಾಪಂಗಳಲ್ಲಿ ಖಾಲಿ ಇರುವ ಜವಾನ ಹುದ್ದೆಯನ್ನು ಕೈ ಬಿಟ್ಟು ಕೇವಲ ಕ್ಲರ್ಕ್ ಕಂಡಾಟ ಎಂಟ್ರಿ ಅಪರೇಟರ್, ಬಿಲ್ ಕಲೆಕ್ಟರ್, ಪಂಪು ಅಪರೇಟರ್್ರ, ಸ್ವಚ್ಛತಗಾರ ಈ ನಾಲ್ಕು ಹುದ್ದೆಗಳಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಎಂಬ ಕಿಶೋರ್ ಕುಮಾರ್ ರವರ ಪ್ರಶ್ನೆಗೆ ಸಚಿವರು ಬಂದಿದೆ ಎಂದು ಉತ್ತರ ನೀಡಿದ್ದಾರೆ.
ಜವಾನ ಹುದ್ದೆಯನ್ನು ಕಡಿತ ಮಾಡಲು ಕಾರಣವೇನು, ಮುಂದೆ ಜವಾನ ಹುದ್ದೆಯ ಜವಬ್ದಾರಿಗಳನ್ನು ಯಾರಿಗೆ ವಹಿಸಲಾಗುತ್ತದೆ. ಈಗಾಗಲೇ ಸಿಬ್ಬಂದಿ ಕೊರತೆಯಿಂದಿರುವ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದ ಈ ಕ್ರಮದಿಂದ ಜವಾನ ಹುದ್ದೆ ಕಾರ್ಯನಿರ್ವಹಿಸಲು ಇಲ್ಲದೆ ಇರುವುದರಿಂದ ಜವಾನ ಹುದ್ದೆಯನ್ನು ಮುಂದುವರಿಸಲು ಯಾವ ಕ್ರಮ ಕೈಗೊಳ್ಳಲಾಗುವುದು ಎಂದು ಎಂಎಲ್‌ಸಿ ಕಿಶೋರ್ ಕುಮಾರ್ ಕೇಳಿರುವ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ವರೂಪ ವೇತನ ಶ್ರೇಣಿಗಳ ನೇಮಕಾತಿ ವಿಧಾನ ಮತ್ತು ಇತರೆ ಸೇವ ಷರತ್ತುಗಳು) ನಿಯಮಗಳು 2020 ರ ಸಿಬ್ಬಂದಿ ವರ್ಗದ ಮಾದರಿಯಲ್ಲಿ ಅಟೆಂಡೆಂಟ್ ಹುದ್ದೆಯನ್ನು ನಿರ್ದಿಷ್ಟಪಡಿಸಲಾಗಿದೆ. ಈ ಹುದ್ದೆಯನ್ನು ಸಿಬ್ಬಂದಿ ವರ್ಗದ ಮಾದರಿಯಿಂದ ಕಡಿತ ಮಾಡಿರುವುದಿಲ್ಲ. ವಾಟರ್ ಅಪರೇಟರ್ ಅಟೆಂಡೆಂಟ್ ಮತ್ತು ಕ್ಲೀನರ್ಸ್ ಹುದ್ದೆಗಳನ್ನು ಬಹುಪಯೋಗಿ ಹುದ್ದೆಗಳೆಂದು ಪರಿಗಣಿಸಿರುವುದರಿಂದವಾಟರ್ ಅಪರೇಟರ್ ಅಟೆಂಡೆಂಟ್ ರವರು ಗ್ರಾಮ ಪಂಚಾಯಿತಿಯಲ್ಲಿ ಈ ಜವಾಬ್ದಾರಿಗಳನ್ನು ನಿರ್ವಹಿಸಬಹುದಾಗಿದೆ ಎಂದು ಉತ್ತರಿಸಿದ್ದಾರೆ.
0 Comments