Ticker

6/recent/ticker-posts

ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ 13,735 ಕ್ಲರ್ಕ್ ಹುದ್ದೆ ನೇಮಕ: ಅರ್ಜಿ ಲಿಂಕ್, ವಿಧಾನ ಇಲ್ಲಿದೆ..


SBI Clerk Jobs 2025: ನೀವು ಪದವಿ ಪಾಸಾಗಿದ್ದೀರಾ.. ಬ್ಯಾಂಕ್‌ ಹುದ್ದೆಗೆ ಸೇರುವ ಆಸಕ್ತಿ ನಿಮಗಿದೆಯಾ.. ಹಾಗಿದ್ರೆ ಇಲ್ಲಿದೆ ನೋಡಿ ಭರ್ಜರಿ ಜಾಬ್‌ ಅವಕಾಶ. ಸರ್ಕಾರಿ ಹುದ್ದೆಯಂತೆಯೇ ನಿಮಗೆ ಎಲ್ಲ ಸೌಲಭ್ಯಗಳನ್ನು ನೀಡುವ, ಖಾಯಂ ಹುದ್ದೆಯಾಗಿ ನೇಮಕ ಮಾಡಿಕೊಳ್ಳುವ ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆಗಳ ಭರ್ತಿಗೆ ಇದೀಗ ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನ ಕಸ್ಟಮರ್ ಸಪೋರ್ಟ್‌ ಮತ್ತು ಸೇಲ್ಸ್‌ ವಿಭಾಗದಲ್ಲಿ ಕ್ಲೆರಿಕಲ್ ಕೇಡರ್‌ನ ಬರೋಬರಿ 13,735 ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಕರ್ನಾಟಕ ವಲಯದಲ್ಲಿ ಒಟ್ಟು 50 ಹುದ್ದೆಗಳಿದ್ದು, ಅರ್ಹ ಮತ್ತು ಆಸಕ್ತ ಪದವೀಧರ ಬ್ಯಾಂಕ್‌ ಉದ್ಯೋಗ ಆಕಾಂಕ್ಷಿಗಳು ಈಗಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ಕಂಪ್ಲೀಟ್ ಡೀಟೇಲ್ಸ್‌ ಇಲ್ಲಿದೆ ನೋಡಿ.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು:

ಅಧಿಕೃತ ಅಧಿಸೂಚನೆಯಂತೆ ಶೈಕ್ಷಣಿಕ ಅರ್ಹತೆಗಳ ಕುರಿತು ನಿಮಗೆಲ್ಲಾ ಮಾಹಿತಿಯನ್ನು ತಿಳಿಸುವುದಾದರೆ ಮಾನ್ಯ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ಪದವಿ ಪೂರ್ಣಗೊಳಿಸಬೇಕು. 

ವಯೋಮಿತಿ ಎಷ್ಟಿರಬೇಕು: 

* ಅಧಿಕೃತ ಅಧಿಸೂಚನೆಯಂತೆ ವಯೋಮಿತಿ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಪೂರೈಸ ಇರಬೇಕು ಹಾಗೆ ಗರಿಷ್ಠ 28 ವರ್ಷದ ಒಳಗಡೆ ಇರಬೇಕಾಗುತ್ತದೆ. 

* ಗಮನಿಸಿ ನೀವು ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಪೊಲೀಸಬೇಕಾಗುತ್ತದೆ ಹಾಗೆ 28 ವರ್ಷ ಒಳಗಡೆ ಇರಬೇಕು ಇಂತಹ ಅಭ್ಯರ್ಥಿಗಳಿಗೆ ಮಾತ್ರ ಅರ್ಹತೆ ಇರುತ್ತೆ ಅರ್ಜಿ ಸಲ್ಲಿಸಲು. 

ವಯೋಮಿತಿ ಸಡಿಲಿಕೆ ಮಾಡಲಾಗಿದೆ:

ಎಸ್ ಬಿ ಐ ಬ್ಯಾಂಕ್ ನೇಮಕಾತಿ 2025 ಇಲ್ಲಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಮಾಡಲಾಗಿದೆ ಇದರ ಕುರಿತು ಮಾಹಿತಿ ಈ ಕೆಳಗಿನಂತಿದೆ.

* OBC ಅಭ್ಯರ್ಥಿಗಳಿಗೆ 3 ವರ್ಷ 

* SC, ST ಅಭ್ಯರ್ಥಿಗಳಿಗೆ 5 ವರ್ಷ 

* PWBD,EWS ಈ ಅಭ್ಯರ್ಥಿಗಳಿಗೆ 10 ವರ್ಷಗಳು.

ಅರ್ಜಿ ಶುಲ್ಕ ಎಷ್ಟಿರುತ್ತೆ

* Sc,St ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. 

* OBC,EWS ಅಭ್ಯರ್ಥಿಗಳಿಗೆ ರೂಪಾಯಿ 750.

* ಪಾವತಿ ವಿಧಾನ ಆನ್ಲೈನ್ ಮೂಲಕ.

ವೇತನ:

ಎಸ್ ಬಿ ಐ ಬ್ಯಾಂಕ್ ನೇಮಕಾತಿ 2025 ಪ್ರತಿ ತಿಂಗಳ ವೇತನ ಕುರಿತು ಅಧಿಕೃತ ಅಧಿಸೂಚನೆಯಂತೆ ನಿಮಗೆಲ್ಲ ಮಾಹಿತಿಯನ್ನು ತಿಳಿಸುವುದಾದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 24,050 ಪ್ರಾರಂಭದ ವೇತನ ಆಗಿರುತ್ತೆ ಮುಂದೆ ನಿಮಗೆ 64,480 ರೂಪಾಯಿಗಳ ವರೆಗೆ ವೇತನವನ್ನು ನೀಡಲಾಗುತ್ತೆ.

ಆಯ್ಕೆ ವಿಧಾನ: 

ಅಧಿಕೃತ ಅಧಿಸೂಚನೆಯಂತೆ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸುವುದಾದರೆ ಮೊದಲು ಪೂರ್ವಭಾವಿ ಪರೀಕ್ಷೆ ನಂತರ ಮುಖ್ಯ ಪರೀಕ್ಷೆ ಇದಾದ ನಂತರ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತೆ. 


ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ: 

ಅರ್ಜಿ ಪ್ರಾರಂಭ : 17-12-2024

ಅರ್ಜಿ ಕೊನೆ      : 07-01-2025

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

ಅಧಿಕೃತ ಆದಿ ಸೂಚನೆ:Click ಮಾಡಿ

ಅರ್ಜಿ ಹಾಕಲು:Click ಮಾಡಿ

Post a Comment

0 Comments