Ticker

6/recent/ticker-posts

ಸಾರಿಗೆ ನೌಕರರ ಮುಷ್ಕರ: ಜನವರಿ 1ರಿಂದ ಬಸ್‌ ಸಂಚಾರ ಬಂದ್‌?

 

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ'ಗಳ ನೌಕರರು ಡಿಸೆಂಬರ್ 31ರಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯ ಸಮಿತಿಯೂ ಸೇರಿದಂತೆ ಒಟ್ಟು ಆರು ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಮುಷ್ಕರದ ಹಿನ್ನೆಲೆ ಜನವರಿ 1ರಿಂದ ಸಾರಿಗೆ ಬಸ್‌ಗಳ ಸಂಚಾರ ಇರುವುದಿಲ್ಲ ಎಂದೂ ಹೇಳುತ್ತಿವೆ.

ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ಬೆಂಗಳೂರಿನ ವಿವಿಧ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕರ ಪತ್ರ ಹಂಚಿಕೆ ಮಾಡಿದ್ದಾರೆ. ನೌಕರರ ಮುಷ್ಕರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. 'ಜನವರಿ 1ರಿಂದ ಬಸ್ ಸಂಚಾರ ಇರುವುದಿಲ್ಲ ಸಹಕರಿಸಿ' ಎಂದು ಹೇಳಿದ್ದಾರೆ.

ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ, ಮುಷ್ಕರ ನಡೆಸುವ 21 ದಿನಗಳ ಮುಂಚಿತವಾಗಿ ಸರ್ಕಾರಕ್ಕೆ ನೋಟಿಸ್‌ ಕೊಡಬೇಕು. ಅದರಂತೆ, ಡಿಸೆಂಬರ್ 9ರಂದು ಸರ್ಕಾರಕ್ಕೆ ನೋಟಿಸ್ ಕೊಡಲಾಗಿದೆ. ರಾಜ್ಯಾದ್ಯಂತ ಎಲ್ಲ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಹೇಳಿದೆ.

Post a Comment

0 Comments