SSP ಪ್ರಿ ಮೆಟ್ರಿಕ್ ( ಒಂದನೇ ತರಗತಿ ಯಿಂದ 10 ನೇ ತರಗತಿ ವರಗೆ) ಹಾಗು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ(10 ನೇ ತರಗತಿ ನಂತರ ವಿದ್ಯಾರ್ಥಿಗಳಿಗೆ) ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನವಂಬರ್ 30 ಕ್ಕೆ ಕೊನೆಯ ದಿನಾಂಕವಾಗಿತ್ತು, ಇದೀಗ ಮತ್ತೆ ಅರ್ಜಿ ಹಾಕಲು ದಿನ ಮುಂದೂಡಲಾಗಿದೆ. ದಿನಾಂಕ ಡಿಸಂಬರ್ 30 ರ ತನಕ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳಿಗೆ SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಎರಡು ತಿಂಗಳ ಹಿಂದೆಯೇ ಆರಂಭಗೊಂಡಿತು.ಸರ್ವರ್ ಸಮಸ್ಯೆಯಿಂದಾಗಿ ಹಾಗು ಇನ್ನು ಕೆಲವು ವಿದ್ಯಾರ್ಥಿಗಳದ್ದು ತಮ್ಮ ರಿಜಿಸ್ಟ್ರೇಷನ್ ನಂಬರ್ ಅಪ್ಡೇಟ್ ಆಗದ ಕಾರಣದಿಂದ ಅರ್ಜಿ ಹಾಕಲು ಬಾಕಿ ಉಳಿದಿತ್ತು,ಇದೀಗ ಒಂದು ತಿಂಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಬೇಕಾದ ದಾಖಲೆಗಳು:
SSP ಪ್ರಿ ಮೆಟ್ರಿಕ್( ಒಂದನೇ ತರಗತಿ ಯಿಂದ 10 ನೇ ತರಗತಿ ವರಗೆ)
* ಆಧಾರ್ ಕಾರ್ಡ್
* ಜಾತಿ ಆದಾಯ ಪ್ರಮಾಣ ಪಾತ್ರ
* SATS ನಂಬರ್
* ಮೊಬೈಲ್ ನಂಬರ್
SSP ಪೋಸ್ಟ್ ಮೆಟ್ರಿಕ್ (10 ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ )
* ಆಧಾರ್ ಕಾರ್ಡ್
* ಜಾತಿ ಆದಾಯ ಪ್ರಮಾಣ ಪಾತ್ರ
* SSLC ಮಾರ್ಕ್ ಕಾರ್ಡ್
* ಹಿಂದಿನ ವರ್ಷದ ಅಂಕ ಪಟ್ಟಿ
* ಮೊಬೈಲ್ ನಂಬರ್
ಕೊನೆಯ ದಿನಾಂಕ: 30/12/2024
0 Comments