State Bank Of India: ಆಶಾ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. 6 ರಿಂದ 12 ನೇ ತರಗತಿ ವಿದ್ಯಾರ್ಥಿಗಳು ಹಾಗೂ ಪದವಿ,ಸ್ನಾತಕೋತ್ತರ,ಐಐಟಿ,ಐಐಎಂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳ ಕುಟುಂಬದ ಆದಾಯ ಮಿತಿ 2.50 ಲಕ್ಷ ಮೀರಿಬಾರದು,ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.50 ಮೀಸಲಾತಿ ಇರಲಿದೆ.SC ST ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗತ್ತದೆ. 12000 ರೂಪಾಯಿಯಿಂದ 7.50 ಲಕ್ಷ ರೂಪಾಯಿ ತನಕ ಆರ್ಥಿಕ ನೆರವು ಸಿಗಲಿದೆ.
ಯಾರಿಗೆ ಎಷ್ಟು ವಿದ್ಯಾರ್ಥಿವೇತನ ಸಿಗಲಿದೆ?
* ಶಾಲಾ ವಿದ್ಯಾರ್ಥಿಗಳಿಗೆ 12,000 ರೂ.
* ಪದವಿ ವಿದ್ಯಾರ್ಥಿಗಳಿಗೆ 50,000 ರೂ
* ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 70,000 ರೂ.
*IM (MBA/PGDM) ವಿದ್ಯಾರ್ಥಿಗಳಿಗೆ ರೂ.7.50 ಲಕ್ಷಗಳು.
ಆಯ್ಕೆ ಪ್ರಕ್ರಿಯೆ:
ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯು ಶೈಕ್ಷಣಿಕ ಅರ್ಹತೆ ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿರುತ್ತದೆ. ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ನಂತರ ದಾಖಲೆ ಪರಿಶೀಲನೆ ಇರುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನವನ್ನು ನಡೆಸಲಾಗುತ್ತದೆ. ವಿದ್ಯಾರ್ಥಿವೇತನದ ಮೊತ್ತವನ್ನು ಆಯ್ಕೆಯಾದ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಇದು ಒಂದು ಬಾರಿಯ ವಿದ್ಯಾರ್ಥಿವೇತನ ಮಾತ್ರ.
ಬೇಕಾದ ದಾಖಲೇಗಳು
* ಹಿಂದಿನ ಶೈಕ್ಷಣಿಕ ವರ್ಷದ ಅಂಕ ಪಟ್ಟಿ
* ಜಾತಿ ಪ್ರಮಾಣಪತ್ರ
* ಆದಾಯ ಪ್ರಮಾಣಪತ್ರ
* ಅರ್ಜಿದಾರರ ಒಂದು ಪೋಟೋ
*ಶುಲ್ಕ ಪಾವತಿಸಿದ ರಶೀದಿ
*ಪ್ರಸಕ್ತ ವರ್ಷದ ಶಾಲಾ ವ್ಯಾಸಂಗ ಪ್ರಮಾಣಪತ್ರ
*ಬ್ಯಾಂಕ್ ಖಾತೆ ವಿವರ
*ಮೊಬೈಲ್ ನಂಬರ್
*ಜಿಮೇಲ್ ID
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ:
30/11/2024
0 Comments