ಧಾರವಾಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಲೈಬ್ರರಿ ಸೂಪರ್‌ವೈಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಮೀಸಲಾತಿ ವಿವರ, ವಿದ್ಯಾರ್ಹತೆ, ವಯಸ್ಸಿನ ಅರ್ಹತೆ, ಇತರೆ ವಿವರಗಳನ್ನು ತಿಳಿದು ಅಪ್ಲಿಕೇಶನ್ ಸಲ್ಲಿಸಿ.
ತಾಲ್ಲುಕುವಾರು ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಧಾರವಾಡ : 7,ಹುಬ್ಬಳ್ಳಿ : 7,ಕುಂದಗೋಳ : 6 ,ನವಲಗುಂದ : 6,ಕಲಘಟಗಿ : 2,ಅಳ್ನಾವರ : 2,ಅಣ್ಣಿಗೇರಿ : 2
ಅರ್ಜಿ ಶುಲ್ಕವೆಷ್ಟು?
ಸಾಮಾನ್ಯ ವರ್ಗದ ಅಭ್ಯರ್ಥಿಗಳು 500 ರೂ., 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 300 ರೂ., ಎಸ್ಸಿ/ ಎಸ್ಟಿ ಪ್ರವರ್ಗ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 200 ರೂ., ಅಂಗವಿಕಲ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.ಗ್ರಾಮ ಪಂಚಾಯತಿ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಕನಿಷ್ಠ ವೇತನ 16,382 ರೂಪಾಯಿ ನಿಗದಿಪಡಿಸಲಾಗಿದ್ದು; ಇದರ ಜೊತೆಗೆ ತುಟ್ಟಿಭತ್ಯೆ ಹಾಗೂ ವಿವಿಧ ಸರ್ಕಾರಿ ಸವಲತ್ತುಗಳು ಅನ್ವಯವಾಗುತ್ತವೆ.
ಗ್ರಾಮ ಪಂಚಾಯತಿ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ನಲ್ಲಿ ಪ್ರಮಾಣಪತ್ರ ಹೊಂದಿರಬೇಕು. ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ನಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ?
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಇದೇ ಡಿಸೆಂಬರ್ 4ಕ್ಕೆ ಅನ್ವಯವಾಗುವಂತೆ 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು 35 ವರ್ಷ, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳು 38 ವರ್ಷ, ಎಸ್ಸಿ/ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳು 40 ವರ್ಷ ಗರಿಷ್ಠ ವಯೋಮಿತಿಯ ಒಳಗಿರಬೇಕು. ಅಂಗವಿಕಲ ಮತ್ತು ವಿಧವೆ ಅಭ್ಯಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 04/12/2024
ಅರ್ಜಿ ಸಲ್ಲಿಲು ಬೇಟಿ ನೀಡಿ:Apply Now
0 Comments