ಗೃಹ ಲಕ್ಷ್ಮೀ ಯೋಜನೆ ಹಣ ಎರಡು ತಿಂಗಳ ವಿಳಂಬದ ಕುರಿತು ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಗುರುವಾರ ವಿಧಾನಸೌಧದಲ್ಲಿ ಮಾಧ್ಯಮದ ಮುಂದೆ ಇದರ ಕುರಿತು ಮಾತನಾಡಿದರು,ಒಂದು ತಿಂಗಳದ್ದು ತಡವಾಗಿದೆ.ನಾಲ್ಕೈದು ದಿನದಲ್ಲಿ ಸಮಸ್ಯೆ ಪರಿಹಾರ ಮಾಡುತ್ತೆವೆ ಎಂದಿದ್ದಾರೆ.
ಕಳೆದ ಎರಡು ತಿಂಗಳಿಂದ ಮಹಿಳೆಯರಿಗೆ ಹಣ ಜಮಾ ಆಗಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಸಚಿವೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಸರ್ಕಾರಿ ನೌಕರರಿಗೂ ಸಂಬಳ ಕೊಡುವಾಗ ಒಂದು ತಿಂಗಳ ಬಳಿಕ ಇನ್ನೊಂದು ತಿಂಗಳ ಹಣ ಹಾಕ್ತೀವಿ ಎಂದಿದ್ದಾರೆ. ಎರಡು ತಿಂಗಳು ತಡ ಆಗಿರುವುದು ಹೌದು ಆದರೆ ಈ ಸಮಸ್ಯೆಯನ್ನು 4-5 ದಿನಗಳಲ್ಲಿ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.
ಚುನಾವಣೆ ಹಿನ್ನೆಲೆ ಹಣ ಹಾಕಲಾಗಿತ್ತು ಎಂಬ ಕೆಲವರ ಆರೋಪಕ್ಕೆ ಪ್ರತಿಕ್ರಿಯಿಸಿದರು, ಚುನಾವಣೆ ಹಿನ್ನೆಲೆ ನಾವು ಹಣ ಹಾಕಿಲ್ಲ. ಕಳೆದ ದಿನಗಳಲ್ಲಿ ಯಾವುದೇ ಚುನಾವಣೆ ಇರಲಿಲ್ಲ 14 ತಿಂಗಳು ಹಣ ಖಾತೆಗೆ ಜಮಾ ಮಾಡಿದ್ದೇವೆ. ಚುನಾವಣೆ ಸಮಯದಲ್ಲಿ ಹಾಕುವುದಾದರೆ ಚುನಾವಣೆಗೆ ಮಾತ್ರ ಹಾಕಿದ್ದಾರೆ ಎಂದು ಟೀಕೆ ಮಾಡುತ್ತಾರೆ ಎಂದು ಹೇಳಿದರು.
0 Comments