Ticker

6/recent/ticker-posts

ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ. ರಾಜ್ಯದಲ್ಲಿ 4.36 ಲಕ್ಷ ಮಂದಿ ನೋಂದಣಿ.


ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾ ಸೂರ್ಯ ಘರ್ ವಿದ್ಯುತ್ ಯೋಜನೆಗಾಗಿ ಬೆಸ್ಕಾಂ ಭರ್ಜರಿ ಸಬ್ಸಿಡಿ ಆಫರ್ ಗಳನ್ನು ನೀಡಿದೆ. 1 ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ತಗಲುವ ವೆಚ್ಚದಲ್ಲಿ 30 ಸಾವಿರ ರೂ. ಸಬ್ಸಿಡಿ ಹಾಗೂ 2 ಕಿಲೋ ವ್ಯಾಟ್ ಸಾಮರ್ಥ್ಯದ ಪ್ಯಾನೆಲ್ ಅಳವಡಿಕೆಗೆ ತಗಲುವ ವೆಚ್ಚದಲ್ಲಿ 60 ಸಾವಿರ ರೂ. ಹಾಗೂ 3 ಕಿಲೋ ವ್ಯಾಟ್ ಸಾಮರ್ಥ್ಯದ ಪ್ಯಾನೆಲ್ ಅಳವಡಿಕೆಯಲ್ಲಿ ತಗಲುವ ವೆಚ್ಚದಲ್ಲಿ 78 ಸಾವಿರ ರೂ. ಸಬ್ಸಿಡಿ ನೀಡುವುದಾಗಿ ತಿಳಿಸಿದೆ.

ಈ ಯೋಜನೆಯಡಿ ಪ್ರತಿ ಮನೆಯ ಮೇಲೆ ವಿದ್ಯುತ್ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿ ಆ ಮನೆಗೆ ಬೇಕಾದ ವಿದ್ಯುತ್ತನ್ನು ಸ್ವಯಂ ಆಗಿ ಉತ್ಪಾದಿಸಬಹುದು. ಇದಕ್ಕೆ ತಗಲುವ ಖರ್ಚಿನ ಮೇಲೆ ಸಬ್ಸಿಡಿ ಕೊಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈಗ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬೆಸ್ಕಾಂ ವತಿಯಿಂದ ಸಬ್ಸಿಡಿಯನ್ನು ಘೋಷಿಸಿದೆ.

ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್

ಸರ್ಕಾರಿ ಉದ್ಯೋಗದಲ್ಲಿ ಇಲ್ಲದ ಹಾಗೂ ಸ್ವಂತ ಮನೆ ಹೊಂದಿರುವ ಯಾರು ಬೇಕಾದರೂ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ತಮ್ಮ ಮನೆಯ ಛಾವಣಿಯ ಮೇಲೆ ಸೋಲಾರ್ ವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳಲು ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ಸಾಲ ನೀಡಲಾಗುತ್ತದೆ.

ಇ-ಶ್ರಮ ಕಾರ್ಡ್ ಯೋಜನೆ ಎಂದರೇನು? ಪ್ರಯೋಜನಗಳ ಬಗ್ಗೆ ಗೊತ್ತಿದೆಯೇ? ನೋಂದಣಿ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ Click

ಸಹಾಯಧನ ವಿವರ                                                                                                                             * ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 30,000 ರೂ.

* ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 60,000 ರೂ.

* ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 78,000 ರೂ.      

 ನೋಂದಣಿ ಹೇಗೆ?                                                                                                           

ಪ್ರಧಾನ ಮಂತ್ರಿ ಸೂರ್ಯ ಫರ್ ಯೋಜನೆಯಡಿ ಸೋಲಾರ್ ಘಟಕ ಅಳವಡಿಕೆಯಲ್ಲಿ ಆಸಕ್ತಿಯುಳ್ಳವರು www.pmsuryaghar.gov.in ಈ ವೆಬ್‌ಸೈಟ್‌ಗೆ ಭೇಟಿ ನೀಡಿ, ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಕೆ ಲಿಂಕ್:Apply ಮಾಡಿ

Post a Comment

0 Comments