ಗೃಹಲಕ್ಷ್ಮಿ ಯೋಜನೆಯ ಉಳಿದಿರುವ ಕಂತುಗಳ ಹಣ ಜಮಾ ಮಾಡಲು ಸರ್ಕಾರ ಸಜ್ಜಾಗಿದೆ. ಜೂನ್ ತಿಂಗಳ ಹಣ ಪಾವತಿಯಾಗಿದ್ದು, ಜುಲೈ ಹಾಗೂ ಆಗಸ್ಟ್ ತಿಂಗಳ ಹಣ ಎಲ್ಲಾ ಫಲಾನುಭವಿಗಳ ಖಾತೆಗೆ ಒಟ್ಟಿಗೆ ಬರುವ ಸಾಧ್ಯತೆ ಇದೆ.
ಈ ಬಗ್ಗೆ ಅದಿಕೃತ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಕೆಬ್ಬಾಳ್ಕರ್ ಆವರು ಪ್ರತೀ ತಿಂಗಳೂ ಈ ಯೋಜನೆಗೆ 2,400 ಕೋಟಿ ರೂಪಾಯಿ ಖರ್ಚಾಗುತ್ತಿದೆ.ಇದೀಗ ತಾಂತ್ರಿಕ ದೋಷಗಳೆಲ್ಲವೂ ಬಗೆಹರಿದಿದ್ದು,ಎಲ್ಲರಿಗೂ ಹಣ ತಲುಪಲಿದೆ ಎಂದಿದ್ದಾರೆ.
ಇನ್ನೂ ನಾಲ್ಕೈದು ಜಿಲ್ಲೆಗಳಿಗೆ ಯೋಜನೆಯ ಹಣ ಸಿಗಬೇಕಿದೆ.ಬ್ಯಾಂಕ್ ಗಳಿಗೆ ಸಕಾಲಕ್ಕೆ ಹಣ ಕಳುಹಿಸಿರುತ್ತೇವೆ.ದೊಡ್ಡ ಮೊತ್ತದ ಹ ಹಣ ಆಗಿರುವ ಕಾರಣ ವಿಳಂಬ ಆಗುತ್ತದೆ ಎಂದು ಹೇಳಿದ್ದಾರೆ. ಮಹಿಳೆಯರಿಗೆ ಅವರ ಖಾತೆಗೆ ಎರಡು ತಿಂಗಳ ಒಟ್ಟು 4000 ರೂಪಾಯಿ ಹಣ ಜಮೆ ಮಾಡಲಾಗುತ್ತಿದೆ.ಸದ್ಯದಲ್ಲಿಯೇ ಜುಲೈ ಆಗಸ್ಟ್ ತಿಂಗಳ ಹಣ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದಿದ್ದಾರೆ.
0 Comments