ಗ್ಯಾರಂಟಿ ಯೋಜನೆಗಳು ಯಾವುದ ಕಾರಣಕ್ಕೂ ನಿಲ್ಲುಸುದಿಲ್ಲ.ರಾಜ್ಯದ ಬಡವರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ನಾವು ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಹೊರತು ರಾಜಕಾರಣಕ್ಕಾಗಿ ಅಲ್ಲ.ಬಡವರು ಕೂಲಿ ಕಾರ್ಮಿಕರಿಗೆ ಇದರಿಂದ್ದ ಹೆಚ್ಚು ಅನುಕೂಲ ಆಗಬೇಕು ಎಂಬ ಉದ್ದೇಶದಿಂದ್ದ ನೀಡಲಾಗುವುದು. ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ವಷ್ಟಪಡಿಸಿದ್ದಾರೆ.
ಕಳೆದ ಬಾರಿ ಗಿಂತ ಈ ಬಾರಿ ಅಧಿಕ ಬಜೆಟ್ ಮಂಡನೆ ಮಾಡಲಾಗಿದೆ. ಹಾಗಾಗಿ ಈ ಯೋಜನೆಗಳಿಗೆ ಹಣಕಾಸಿನ ಯಾವುದೇ ತೊಂದರೆ ಆಗುವುದಿಲ್ಲ.ಈ ಯೋಜನೆಗಳನ್ನು ಮುಂದುವರಿಸುತ್ತೆವೆ.ಕಳೆದ ವರ್ಷ ನಮ್ಮ ಬಜೆಟ್ ಎಂಟು ತಿಂಗಳಿಗೆ ಮಾತ್ರ ಸೀಮಿತವಾಗಿದ್ದು ಈ ಬಾರಿ ಸಂಪೂರ್ಣ ಬಜೆಟ್ ಮಂಡಿಸಲಾಗಿದೆ.
ಈ ಗ್ಯಾರಂಟಿ ಯೋಜನೆಗಳು ರಾಜಕೀಯ ದೃಷ್ಠಿಯಿಂದ ಮಾಡದೇ ಇದ್ದರೂ ಸ್ವಾಭಾವಿಕ ರಾಜಕೀಯಕ್ಕೆ ಅನುಕೂಲ ಆಗಬಹುದೆಂಬ ಊಹೆ ಮಾಡಿದ್ದೇವು ಆದರೆ ಎಷ್ಟರ ಮಟ್ಟಿಗೆ ಆಗಿದ್ದೇವೆ ಎಂಬುದರ ಬಗ್ಗೆ ನಾವು ವಿಶ್ಲೇಷಣೆ ಮಾಡಬೇಕಾಗಿದೆ.ಇದರ ಬಗ್ಗೆ ನಾನು,ಮುಖ್ಯಮಂತ್ರಿಗಳು,ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಎಲ್ಲರೂ ಚರ್ಚೆ ಮಾಡಿದ್ದೇವೆ. ಅಲ್ಲಿ ಹಿರಿಯರು ಅನುಭವಿಗಳ ಸಮಿತಿ ರಚಿಸಿ ಇದರ ಆತ್ಮವಲೋಕಾನ ಮಾಡಿಕೊಳ್ಳಬೇಕು ಎಂದು ಅನೇಕ ಸಚಿವರು ಸಲಹೆ ಹಾಗೂ ಅಬಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
0 Comments