Ticker

6/recent/ticker-posts

35 ಸಾವಿರ ಅತಥಿ ಶಿಕ್ಷಕರ ನೇಮಕಾತಿಗೆ ಸೂಚನೆ.

 


ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ 35 ಸಾವಿರ ಅತಥಿ ಶಿಕ್ಷಕರನ್ನು ತಾತ್ಕಲಿಕ ನೇಮಕಾತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ಅವಧಿ ಅಂತ್ಯವಾಗುವರೆಗೆ ನೇಮಕಾತಿ ಮಾಡಿಕೊಳ್ಳಬೇಕು.ಶಿಕ್ಷಕರಿಗೆ ಮಾಸಿಕ 10 ಸಾವಿರ ಗೌರವಧನ ನೀಡಬೇಕು.ಖಾಲಿ ಇರುವ 35 ಸಾವಿರ ಶಿಕ್ಷಕ ಹುದ್ದೆಗಳಲ್ಲಿ ಮೊದಲ ಹಂತದಲ್ಲಿ 33863 ಖಾಲಿ ಹುದ್ದೆಗಳಿಗೆ ಷರತ್ತುಗಳಿಗೆ ಒಳಪಡಿಸಿ ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗದೆ.

ಗ್ರಾಮೀಣ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹಾಗೂ ಶಿಕ್ಷಕ ರಹಿತ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳ ಅಧಿಕವಾಗಿರುವ ಶಾಲೆಗಳಿಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳು,ಬೆಂಗಳೂರು ಪಬ್ಲಿಕ್ ಶಾಲೆಗಳು.ಆಂಗ್ಲ ಮಾಧ್ಯಮ ತರಗತಿಗಳಿರುವ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇ.100 ರಷ್ಟು ಅತಥಿ ಶಿಕ್ಷಕರನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಬೇಕು.ಹುದ್ದೆಗೆ ನಿಗದಿಪಡಿಸಿರುವ ಕನಿಷ್ಟ ವಿದ್ಯಾರ್ಹತೆ ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.

ಯಾವ ಜಿಲ್ಲೆಗೆ ಎಷ್ಟು ಶಿಕ್ಷಕರ ನೇಮಕ

ಬಾಗಲಕೋಟೆ         1008,           ಮಂಡ್ಯ            778         

ಬೆಳಗಾವಿ                3688,          ಮೈಸೂರು       1001

ಬೆಂ.ಗ್ರಾಮಾಂತರ     521,           ರಾಮನಗರ      900 

ಬೆಂಗಳೂರು ನಗರ    1727,         ಶಿವಮೊಗ್ಗ         780

ಚಾಮರಾಜನಗರ      584,           ಉಡುಪಿ           364

ಚಿಕ್ಕಬಳ್ಳಾಪುರ          542,           ಉತ್ತರ ಕನ್ನಡ    1070

ಚಿಕ್ಕಮಂಗಳೂರು       468,          ವಿಜಯಪುರ       1336

ದಕ್ಷಿಣ ಕನ್ನಡ             1033,         ಯಾದಗಿರಿ         2259

ದಾವಣಗೆರೆ               395,           ಬಳ್ಳಾರಿ            1476

ಧಾರವಾಡ               766,            ವಿಜಯನಗರ     655

ಗದಗ                      643,            ರಾಯಚೂರು     2259

ಹಾಸನ                   804,              ಕೊಪ್ಪಳ           1476

ಹಾವೇರಿ                  964,             ಕಲಬುರ್ಗಿ         1832         

ಕೊಡಗು                 265,               ಬೀದರ್           632

ಕೋಲಾರ               565,                ತುಮಕೂರು     1832






Post a Comment

0 Comments