Ticker

6/recent/ticker-posts

ಹಳೆ ಬಿಎಂಟಿಸಿ ಬಸ್ ಗಳನ್ನು ಬಳಸಿಕೊಂಡು ಬಂಡಿಗಳ ನಿರ್ಮಾಣ

 


ಹಳೆ ಬಸ್ ಗಳನ್ನು ಬಳಸಿ ಭೋಜನ ಬಂಡಿಗಳ ನಿರ್ಮಾನಕ್ಕೆ ಬಿಎಂಟಿಸಿ ಮುಂದಾಗಿದೆ,ಇವುಗಳನ್ನು ಡಿಪೋಗಳಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ.ಈಗ ಒಂದು ಭೋಜನಬಂಡಿ ಮಾಡಲಾಗಿದ್ದು,ಅದು ಯಶವಂತವುರ ಡಿಪೋದಲ್ಲಿ ಈ ಭೋಜನ ಬಂಡಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಿ ಸಾರ್ವಾಜನಿಕರ ಅನುಕೂಲಕ್ಕಾಗಿ  ಬಳಸಲಾಗುವುದು.ಬಸ್ ಎರಡೂ ಕಡೆಯಲ್ಲೂ "ಭೋಜನ ಬಂಡಿ-ಬನ್ನಿ ಕುಳಿತು ಊಟ ಮಾಡೋಣ"  ಎನ್ನವ ಘೋಷವಾಕ್ಯಗಳನ್ನು ಬರೆಯಲಾಗಿದೆ.ಬಸ್ ಸೀಟ್ ಗಳನ್ನು ತೆಗೆದು ಟೇಬಲ್ ಮತ್ತು ಆಸನಗಳನ್ನಾಗಿ ತಯಾರು ಮಾಡಲಾಗಿದೆ.



19 ಡಿಪೋಗಳು ಇದು ಕಾರ್ಯನಿರ್ವಹಿಸುತ್ತಿವೆ.ಕೆಲವು ಕಡೆಗಳಲ್ಲಿ ಕ್ಯಾಂಟೀನ್ ಗಳಿವೆ.ಎಲ್ಲಾ ಕಡೆಗಳಲ್ಲಿ ಇಲ್ಲ,ಕಾರ್ಯಚರಣೆ ನಿಲ್ಲಿಸಿರುವ ಬಸ್ ಗಳನ್ನು ಕ್ಯಾಂಟೀನ್ ಆಗಿ ಪರಿವರ್ತಿಸಿ 17 ಡಿಪೋಗಳಲ್ಲಿ ಅಳವಡಿಸುವ ಯೋಜನೆ ಇದಾಗಿದೆ. ಸದ್ಯ ಒಂದು ಕ್ಯಾಂಟೀನ್ ತಯಾರಾಗಿದೆ ವ್ಯವಸ್ಥಾಪಕ ನಿರ್ದೇಶಕರು ಆರ್ ರಾಮಚಂದ್ರನ್ ರವರು ತಿಳಿಸಿದ್ದಾರೆ.

ಇದರಲ್ಲಿ ಕೈತೊಳೆಯುವ ಬೇಸಿನ್,ಕುಡಿಯುವ ನಿರು,ಫ್ಯಾನ್ ಗಳ ವ್ಯವಸ್ಥೆ ಮಾಡಲಾಗದೆ.ಗಾಜಿನ ಕಿಟಕಿಗಳನ್ನು ಗಾಳಿ ಬೆಳಕಿಗಾಗಿ ಎರಡು ಕಡೆಗಳಲ್ಲಿ ಅಳವಡಿಸಲಾಗಿದೆ, ಹೋಟೆಗಳಲ್ಲಿ ಇರುವ ಎಲ್ಲಾ ಸೌಲಭ್ಯಗಳು ಈ ಬೋಜನ ಬಂಡಿಯಲ್ಲಿದೆ ಎಂದು ತಿಳಿಸಿದ್ದಾರೆ.

Post a Comment

0 Comments