ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಒಟ್ಟಿಗೆ ಸಿಹಿ-ಕಹಿಸುದ್ದಿಯನ್ನು ಹೊರಗೆ ಹಾಕಿದೆ. ಒಂದೆಡೆ 6 ತಿಂಗಳಿಂದ ರೇಷನ್ ಪಡೆಯದವರ ಕಾಡು ರದ್ದತಿಗೆ ಹುಕುಂ ಹೊರಡಿಸುವ ಮೂಲಕ ಶಾಕ್ ನೀಡಿದರೆ, ಮತ್ತೊಂದೆಡೆ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಹೊಸ ರೇಷನ್ ಕಾರ್ಡ್ ವಿತರಿಸಲು ಸಿದ್ಧತೆ ನಡೆಸುವ ಮೂಲಕ ಸಿಹಿ ಸುದ್ದಿ ಹೊರಡಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನ್ವಯ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ಒದಗಿಸುವ ಸಲುವಾಗಿ ರಾಜ್ಯದಲ್ಲಿ, ಅನರ್ಹರು ಹೊಂದಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಗುರುತಿಸಿ ರದ್ದು ಪಡಿಸುವ ಮತ್ತು ಆದ್ಯತೇತರ ಪಡಿತರ ಚೀಟಿಯಾಗಿ ಪರಿವರ್ತಿಸುವ ಕಾರ್ಯ ನಡೆದಿದೆ.
ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ. ಧಾನ್ಯ ಪಡೆದಿಲ್ಲ ಹೀಗಾಗಿ ಆಹಾರ ಇಂತಹ ಕಾರ್ಡಗಳ ಮಾಹಿತಿ ಸಂಗ್ರಹಿಸಿ ಅಷ್ಟು ರೇಷನ್ ಕಾರ್ಡ್ ಗಳ ರದ್ದು ಆದೇಶ ಹೊರಡಿಸಿದೆ.ಇದೇ ವಾರದಲ್ಲಿ 3.26 ಲಕ್ಷ ಕಾಡುಗಳು ಸಸ್ಪೆಂಡ್ ಆಗಲಿವೆ.
ಸದ್ಯ ರಾಜ್ಯದಲ್ಲಿ ಅಂತ್ಯೋದಯ PHH ಹಾಗೂ NPHH ನಲ್ಲಿ ಒಟ್ಟು 1,52,79,343 ರಷ್ಟು ರೇಷನ್ ಕಾರ್ಡ್ ಗಳಿವೆ. ಇನ್ನೂ ಬಿಪಿಎಲ್ ನಲ್ಲಿ 1,27,82,893 ಕಾಡುಗಳಿದ್ದು: ಇವುಗಳಲ್ಲಿ ಒಟ್ಟು 3 ಲಕ್ಷ 26 ಸಾವಿರ ಕಾಡುಗಳು ರದ್ದು ಮಾಡುವುದಕ್ಕೆ ಸರಕಾರ ಮುಂದಾಗಿದೆ.
ಈಗಾಗಲೇ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ 4.62 ಲಕ್ಷ ಮೃತ ಸದಸ್ಯರ ಹೆಸರುಗಳನ್ನು ಪಡೆದ ಚೀಟಿಯಿಂದ ರದ್ದು ಪಡಿಸಲಾಗಿದೆ. ಇದೀಗ ಕಳೆದ ಆರು ತಿಂಗಳಿಂದ ಅಕ್ಕಿ ಪಡೆಯದ 3.26 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಆದೇಶ ಹೊರಡಿಸಿದೆ. ಈ ಕಾರ್ಡ ರದ್ದತಿ ನಂತರ ಹೊಸ ಕಾಡುಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.
ಶಾಶ್ವತರದ್ದು ಆಗುವುದಿಲ್ಲ.
ಹಾಗಂತ ಈಗ ರದ್ಧತಿಗೆ ತೀರ್ಮಾನಿಸಲಾಗಿರುವ ಕಾರ್ಡಗಳು ಶಾಶ್ವತ ರದ್ದಾಗುವುದಿಲ್ಲ. ಇಲಾಖೆ 3.26 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡುವರು ತೀರ್ಮಾನಿಸಿದೆ. ಅಷ್ಟೇ ಇವುಗಳಲ್ಲಿ ಅನೇಕ ಕಾರ್ಡಗಳಿಗೆ ಮತ್ತೆ ಚಾಲ್ತಿ ಸಿಗಬಹುದು ಏಕೆಂದರೆ ಗುಳ್ಳೆ ವೃದ್ಯಾಪ್ಗಳ ಕಾರಣಕ್ಕೆ ಬಹಳಷ್ಟು ಬಡ ಕುಟುಂಬಗಳು ಪಡಿತರ ಪಡೆಯಲು ಸಾಧ್ಯವಾಗಿಲ್ಲ. ಇಂತಹ ಅಸಹಾಯಕ ಕುಟುಂಬಗಳಿಗೆ ರೇಷನ್ ಕಾರ್ಡ್ ಕಾಡುಗಳಿಗೆ ಮತ್ತೆ ಚಾಲನೆ ಸಿಗಲಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಗ್ಯಾನೆಂದ್ರ ಕುಮಾರ್ ಭರವಸೆ ನೀಡಿದ್ದಾರೆ.
ಆರು ತಿಂಗಳ ಕಾಲ ಎಕೆ ಪಡಿತರ ತೆಗೆದುಕೊಂಡಿಲ್ಲ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗುವುದು ಸ್ಥಳೀಯ ಫುಡ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸರ್ವ ಕಾರ್ಯ ನಡೆಯಲಿದೆ ಈ ಬೆಲೆಯಲ್ಲಿ ಕುಟುಂಬದ ಕಾರಣಗಳನ್ನು ಪರಿಗಣಿಸಿ ಮತ್ತೆ ಕಾಡು ರಿ ಆಕ್ಟಿವ್ ಮಾಡುತ್ತೇವೆ ಹಲವು ಕಾರಣಗಳಿಂದ ಫಲಾನುಭವಿಗಳು ರೇಷನ್ ತೆಗೆದುಕೊಂಡಿಲ್ಲ
ಯಾಕೆ ರೇಷನ್ ತೆಗೆದುಕೊಂಡಿಲ್ಲ ಎಂಬ ಬಗ್ಗೆ ಸಮಗ್ರ ಮಾಹಿತಿ ತರಿಸಿಕೊಳ್ಳುತ್ತೇವೆ ಹಾಡುಗಳ ಶಾಶ್ವತರದ್ದು ಆಗುವುದಿಲ್ಲ ಸಮೀಕ್ಷೆ ಮುಗಿದ ಬರವವರೆಗೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಹೊಸ ಕಾರ್ಡ್ ವಿತರಣೆಗೆ ಸಿದ್ಧತೆ.
ಶೇ 96. ರಷ್ಟು ಇ- ಕೆವೈಸಿ ಕಾರ್ಯವು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ದಿನಾಂಕ 16-08-2023 ರಂತೆ 2,95,986 ಅರ್ಜಿದಾರರು ಆದ್ಯತಾ ಪಡಿತರ ಚೀಟಿಗಾಗಿ ಹಾಗೂ 71,410 ಅರ್ಜಿದಾರರು ಆದ್ಯತೇತರ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿದಾರರಿಗೆ ರೇಷನ್ ಕಾರ್ಡ್ ವಿತರಿಸುವಂತೆ ಕೋರಿದ್ದಾರೆ.
ಪ್ರಸ್ತುತ ಆದ್ಯತಾ ಮತ್ತು ಆದ್ಯತೇತರ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಅರ್ಹ ಅರ್ಜಿದಾರರಿಗೆ ಪಡಿತರ ಚೀಟಿಯನ್ನು ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ವಿತರಿಸಲು ಸರಕಾರ ಆದೇಶಿಸಿದೆ.
1. ಪ್ರಸ್ತುತ ಅನುಮತಿಸಿರುವ ಹೊಸ ಆದ್ಯತಾ ಪಡಿತರ ಚೀಟಿಗಳ 2.96 ಲಕ್ಷ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳನ್ನು ಸ್ವೀಕರಿಸುವಂತಿಲ್ಲ.
2. ಆದ್ಯತೇತರ (ಎ.ಪಿ.ಎಲ್) ಪಡತರ ಚೀಟಿಯನ್ನು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಅನುಮೋದನೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
3. ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಿರುವ 2.96 ಲಕ್ಷ ಅರ್ಜಿಗಳ ವಿತರಣೆಯ ನಂತರ ಪ್ರಸ್ತುತ ಚಾಲ್ತಿಯಲ್ಲಿರುವ ಆದ್ಯತ/ ಅಂತ್ಯೋದಯ ಪಡಿತರ ಚೀಟಿಗಳ ಸಂಖ್ಯೆಯನ್ನು ಮೀರುವಂತಿಲ್ಲ
4. ಆರು ತಿಂಗಳಿಂದ ನಿರಂತರವಾಗಿ ಆಹಾರಧಾನ್ಯ ಪಡೆಯದೇ ಇರುವ ಪಡಿತರ ಚೀಟಿಗಳನ್ನು ಅಮಾನತುಗೊಳಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯತಕ್ಕದ್ದು.
5. ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಕೆಯಾಗಿರುವ 2.96 ಲಕ್ಷ ಅರ್ಜಿಗಳ ವಿಲೇವಾರಿಯೊಂದಿಗೆ ಏಕಕಾಲದಲ್ಲಿ, ಆರು ತಿಂಗಳ ನಂತರ ಪಡಿತರವನ್ನು ಪಡೆಯದ ಆದ್ಯತಾ ಪಡಿತರ ಚೀಟಿಗಳನ್ನು ಅಮಾನತುಗೊಳಿಸುವುದು.
6. ಅಮಾನತುಪಡಿಸಿರುವ ಪಡಿತರ ಚೀಟಿಗಳನ್ನು ಪುನರ್ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ಖುದ್ದು ಸ್ಥಳ ಪರಿಶೀಲನೆ ಮತ್ತು ದಾಖಲಾತಿ ಪರಿಶೀಲನೆ ನಡೆಸಿ ವರದಿ ನೀಡತಕ್ಕದ್ದು, ಸದರಿ ವರದಿಯನ್ನು ಆಧರಿಸಿ ಸಂಬಂಧಪಟ್ಟ ಜಿಲ್ಲೆಯ ಜಂಟಿ/ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಅನುಮೋದಿಸುವುದು.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಮಾಪನಶಾಸ್ತ್ರ ಇಲಾಖೆಯ ಹನುಮಂತರಾಜು ಎ ಅವರು ಪ್ರಕಟಣೆ ಹೊರಡಿಸಿದ್ದಾರೆ.
0 Comments